(www.vknews. in) ; ಮಂಗಳೂರು ನಗರ ಪೋಲಿಸ್ ಕಮೀಷನರ್ ಆಗಿ ಹಲವಾರು ದಕ್ಷರೂ, ಭ್ರಷ್ಟರೂ ಬಂದು ಹೋಗಿದ್ದಾರೆ. ಅಂತಹ ದಕ್ಷ ಅಧಿಕಾರಿಗಳಲ್ಲಿ ಎಸ್. ಮುರುಗನ್, ಸಂದೀಪ್ ಪಾಟೀಲ್, ಚಂದ್ರಶೇಖರ ಆರ್, ಜಿತೇಂದ್ರ, ಕುಲದೀಪ್ ಜೈನ್ ಮೊದಲಾದವರು. ಇವರು ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿಕೊಂಡು ಉನ್ನತ ಹುದ್ದೆಗಳಿಗೆ ಬಡ್ತಿ ಗೊಂಡಿದ್ದಾರೆ. ಇನ್ನು ಕೆಲವರು ದುಷ್ಟ ರಾಜಕಾರಣಿಗಳ ಸಮಾಜ ಘಾತುಕರ ಅಕ್ರಮ ದಂಧೆಕೋರರ ಬಲೆಗೆ ಬಿದ್ದು ಕೆಟ್ಟ ಹೆಸರು ಪಡೆದುಕೊಂಡು ವಗಾ೯ಯಿಲ್ಪಟ್ಟಿದ್ದಾರೆ. ಮತ್ತೆ ಕೆಲವರು ಮಹಿಳೆಯರ ಮಧ್ಯವತಿ೯ಗಳ ಸಹವಾಸಕ್ಕೆ ಸಿಲುಕಿ ತಾನೊಬ್ಬ ಪೋಲಿಸ್ ಕಮಿಷನರ್ ಎಂಬುದನ್ನು ಮರೆತು ಕತ್ತಲೆಯಾಗುತ್ತಲೇ ಪಾನಮತ್ತರಾಗಿ ಅಂಗಾತ ಬಿದ್ದವರಿದ್ದಾರೆ.
ಆದರೆ ಪ್ರಾಮಾಣಿಕ ಸೇವೆಯೇ ಪರಮ ಧ್ಯೇಯವೆಂದು ನಂಬಿ ತಾನು ಸೇವೆ ಸಲ್ಲಿಸಿದ ರಾಮನಗರ, ವಿಜಯಪುರ, ದಾವಣಗೆರೆ, ಬೆಳ್ಗಾಂ ನಲ್ಲಿ ASP ಯಾಗಿಯೂ, DCP ಯಾಗಿಯೂ ಈಶಾನ್ಯ ವಲಯದ DIG ಯಾಗಿಯೂ ಕನಾ೯ಟಕ ಪೋಸ್ಟ್ ಅಕಾಡೆಮಿ ಯ ನಿದೇ೯ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗೂಂಡಾಗಿರಿ, ಮತೀಯ ಗಲಭೆ, ಗ್ಯಾಂಬ್ಲಿಂಗ್ ಮುಂತಾದ ಅನಿಷ್ಟ ಚಟುವಟಿಕೆಗಳ ವಿರುದ್ಧ ಸಮರ ಸಾರಿ ತಾನು ಸೇವೆ ಸಲ್ಲಿಸಿದ ಎಲ್ಲಾ ಪ್ರದೇಶ ಗಳಲ್ಲೂ ದಕ್ಷ ಪ್ರಾಮಾಣಿಕ ಧೀರ ಅಧಿಕಾರಿ ಎಂಬ ಖ್ಯಾತಿಗೆ ಅನುಪಂ ಅಗರ್ವಾಲ್ ಪಾತ್ರರಾಗಿದ್ದಾರೆ. ಇವರ ಸೇವೆಯನ್ನು ಮನ್ನಿಸಿದ ಸರಕಾರ ಪುರಸ್ಕರಿಸಿದೆ.
ಕಳೆದ 8 ತಿಂಗಳಿಂದ ಮಂಗಳೂರು ನಗರ ಪೋಲಿಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಅನುಪಂ ಅಗರ್ವಾಲ್ ಅಶಾಂತಿ_ ಅಶಿಸ್ತಿನ ಅಗರವಾಗಿದ್ದ ಮಂಗಳೂರು ನಗರವನ್ನು ತಹಬದಿಗೆ ತಂದು ಮಂಗಳೂರು ನಗರದಾದ್ಯಂತ ಶಾಂತಿ-ಸುವ್ಯವಸ್ಥೆ ನೆಲೆ ಗೊಳಿಸಿದವರು. ಜನತೆಯ ಅಪತ್ ಬಾಂದವರಾಗಿ ನೊಂದವರ, ಸಂಕಷ್ಟಕ್ಕೀಡಾದವರ ಸಹಾಯ ಕ್ಕೆ ಧಾವಿಸುವ ಧೀಮಂತಿಕೆಯ ದಿಟ್ಟ ಪೋಲಿಸ್ ಅಧಿಕಾರಿಯಾಗಿದ್ದಾರೆ. ಶ್ರೀ ಅಗರ್ವಾಲ್ ಯಾವುದೇ ಹೊತ್ತಿನಲ್ಲಿ ಜನ ಸಾಮಾನ್ಯರು ನೇರವಾಗಿ ಸಂಪಕಿ೯ಸಿ ತಮ್ಮ ಅಹವಾಲುಗಳನ್ನು ತೋಡಿ ಕೊಂಡರೆ ಜನರ ಕಷ್ಟ ಕಾರ್ಪಣ್ಯಗಳೊಂದಿಗೆ ಸ್ಪಂದಿಸುವ ವಿಶಾಲ ಹೃದಯಿ ಅನುಪಂ ಅಗರ್ವಾಲ್ ಮಂಗಳೂರು ನಗರಕ್ಕೊಂದು ವರದಾನವಾಗಿದ್ದಾರೆ.
ಇದೀಗ ಮಂಗಳೂರು ನಗರದೊಳಗೆ ವಕ್ಕರಿಸಲು ಕೆಲ ಅಧಿಕಾರಿಗಳು ಬಾರೀ ಹೊಂಚು ಹಾಕುತ್ತಿದ್ದು ರಾಜಕಾರಣಿಗಳಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಆದ್ದರಿಂದ ಶ್ರೀ ಅನುಪಂ ಅಗರ್ವಾಲ್ ಅವರೇ ಮಂಗಳೂರು ನಗರದ ಪೋಲಿಸ್ ಕಮಿಷನರ್ ಆಗಿ ಮುಂದುವರಿಯ ಬೇಕೆಂದು ಜನತೆ ಸರಕಾರವನ್ನು ಅಗ್ರಹಿಸಿದ್ದಾರೆ.
ಶೇಖ್ – ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.