(www.vknews. in) ; ದೇಶದ ಯುವ ಜನತೆಯನ್ನು ಶಾಂತಿ ಸೌಹಾರ್ದತೆ ನೆಮ್ಮದಿಯ ಬದುಕಿಗೆ ಹಾಗೂ ಇಸ್ಲಾಮಿನ ಸುಂದರ ಆಶಯಾದರ್ಶಗಳನ್ನು ಮೈಗೂಡಿಸುವಲ್ಲಿ ಪ್ರೇರಣೆ ನೀಡುತ್ತಾ, ಅವರನ್ನು ದೇಶದ ಸತ್ಪ್ರಜೆಯಾಗಿ ಬೆಳೆಸಲು ಹಲವು ವರ್ಷಗಳ ಹಿಂದೆ, ಜನ್ಮ ತಾಳಿದ ಯುವ ಸಂಘಟನೆಯಾಗಿದೆ, ಸುನ್ನೀ ಯುವಜನ ಸಂಘ ಎಸ್.ವೈ.ಎಸ್.
ಸದ್ರಿ ಸಂಘಟನೆಯು, ಕರ್ನಾಟಕ ರಾಜ್ಯದೆಲ್ಲೆಡೆ ಸಾವಿರಾರು ಯುನಿಟ್ ಗಳನ್ನು ಹೊಂದಿದ್ದು, ಸಹಸ್ರಾರು ಕಾರ್ಯಕರ್ತರು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಾಚರಣೆಗೆ ಎಲ್ಲರೂ ಕೈ ಜೋಡಿಸಬೇಕೆಂದು ಎಸ್.ವೈ.ಎಸ್ ಉಪ್ಪಿನಂಗಡಿ ಝೋನ್ ದಅ’ವಾ ಕಾರ್ಯದರ್ಶಿ ಕಲಂದರ್ ಮದನಿ ಕಲ್ಲೇರಿ ಕರೆ ನೀಡಿದರು.
2024-25 ನೇ ಸಾಲಿನ ವಾರ್ಷಿಕ ಕೌನ್ಸಿಲ್ ನ ನೇತೃತ್ವ ನೀಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಸರ್ಕಲ್ ಅಧ್ಯಕ್ಷರಾದ ಎನ್. ಎಂ. ಶರೀಫ್ ಸಖಾಫಿ ನೆಕ್ಕಿಲ್ ಮಾತನಾಡುತ್ತಾ, ಹಲವು ವರ್ಷಗಳಿಂದ ಜಾತಿ ಧರ್ಮ ಭೇದವಿಲ್ಲದೆ ರಾಜ್ಯದೆಲ್ಲೆಡೆ ಎಸ್.ವೈ.ಎಸ್ ಸಮಿತಿ ಹಾಗೂ ಅದರ ಸ್ವಯಂಸೇವಕ, ಸಾಂತ್ವನ ವಿಭಾಗವಾದ ಇಸಾಬ ತಂಡವು ಅಹರ್ನಿಶಿಯಾಗಿ ದುಡಿಯುತ್ತಿದೆ. ಕಳೆದ ಲಾಕ್’ಡೌನ್ ಸಂದರ್ಭದಲ್ಲೂ ಸಕ್ರಿಯವಾಗಿ ಕಾರ್ಯಾಚರಣೆ ಮಾಡಿ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಮುಂದೆಯೂ ತಮ್ಮೆಲ್ಲರ ಸಂಪೂರ್ಣ ಸಹಕಾರ ಅಗತ್ಯ ಇದೆ ಎಂದರು.
ಪ್ರಧಾನ ಕಾರ್ಯದರ್ಶಿ ಉಮರ್ ಶಾಫೀ ಮಾಸ್ಟರ್ ಸ್ವಾಗತಿಸಿದರು. ಝೋನ್ ಪ್ರತಿನಿಧಿ ದಾವುದ್ ಅಶ್ರಫಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಅಬ್ಬಾಸ್ ಕುಪ್ಪೆಟ್ಟಿ, ಉಪಾಧ್ಯಕ್ಷರಾದ ಯೂಸುಫ್ ಬೋವು, ದಅ’ವಾ ಕಾರ್ಯದರ್ಶಿ ಬಶೀರ್ ಮುಸ್ಲಿಯಾರ್, ಇಸಾಬ ಕಾರ್ಯದರ್ಶಿ ಸಲೀಂ ಅಳಕೆ, ಸಾಂತ್ವನ ಕಾರ್ಯದರ್ಶಿ ಶರೀಫ್ ಕುಪ್ಪೆಟ್ಟಿ, ರಝಾಕ್ ಸಖಾಫಿ ಕುಪ್ಪೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಹಲವಾರು ಯುನಿಟ್ ಕೌನ್ಸಿಲರ್ಸ್ ಗಳು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.