ಬಂಟ್ವಾಳ (www.vknews.in) : ಕಡೇಶ್ವಾಲ್ಯ ಗ್ರಾಮದ ಕೆಮ್ಮಾನ್ ಪಳಿಕೆ ನಿವಾಸಿ ಮುಹಮ್ಮದ್ ರಫೀಕ್ (55) ಅವರು ಹೃದಯ ಸಂಬಂಧಿ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳವಾರ ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಬಿ ಸಿ ರೋಡು ಕೇಂದ್ರೀಕರಿಸಿಕೊಂಡು ಡಾಕ್ಯುಮೆಂಟ್ ಕೆಲಸ ನಿರ್ವಹಿಸುತ್ತಿದ್ದ ಮೃತರು ತಾಯಿ, ಪತ್ನಿ, ಐವರು ಗಂಡು ಮಕ್ಕಳ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಚ್ಚಬೆಟ್ಟು ಜುಮಾ ಮಸೀದಿಯಲ್ಲಿ ಶನಿವಾರ ಅಪರಾಹ್ನದ ಬಳಿಕ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.