(www.vknews. in) ; ಇಳಂತಿಲ ಗ್ರಾಮದ ಕಾರ್ಯಪಾಡಿ ಯಿಂದ ಕನ್ಯಾರಕೋಡಿ ವರೆಗಿನ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕನಿಷ್ಠ ನಡೆದು ಕೊಂಡು ಹೋಗಲು ಕೂಡ ಕಷ್ಟ ಸಾಧ್ಯವಾಗಿದೆ.
ಅದಲ್ಲದೆ ಸುಸ್ಥಿರವಾದ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಮಳೆ ನೀರು ಪೂರ್ಣವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಇಂತಹ ಹದಗೆಟ್ಟ ರಸ್ತೆಯ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಮಕ್ಕಳಿಗೆ ಸರಾಗವಾಗಿ ನಡೆದಾಡಲು ವ್ಯವಸ್ಥೆ ಮಾಡಿ ಕೊಡುವ ಬಗ್ಗೆ ಸ್ಥಳೀಯ ಸರಕಾರಿ ಶಾಲೆಯ ಅಧ್ಯಕ್ಷ, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ನಿರ್ದೇಶಕರೂ ಆಗಿರುವ ಅಬ್ದುಲ್ ಲತೀಫ್ ರವರು ಇಳಂತಿಲ ಗ್ರಾಮ ಪಂಚಾಯತ್ ಗೆ ಮನವಿಯನ್ನು ಸಲ್ಲಿಸಿ,ಆದಷ್ಟು ಬೇಗ ಮಕ್ಕಳಿಗೆ ಪೂರಕವಾಗಿ ರಸ್ತೆಯನ್ನು ದುರಸ್ತಿ ಮಾಡಲು ಆಗ್ರಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.