(www.vknews. in) ; ಸಚಿವ ಝಮೀರ್ ಅಹ್ಮದ್ ಖಾನ್ ರವರ ಹಜ್ ಸೇವೆಗೆ ಪ್ರಾರ್ಥನೆಯೇ ನಮ್ಮ ಗೌರವ, ರಾಜ್ಯ ವಕ್ಫ್ ಸಚಿವ ಝಮೀರ್ ಅಹ್ಮದ್ ಅವರು ಮೊದಲೇ ಮಾನವೀಯತೆ ಇರುವ ಮಾದರೀ ಜನ ನಾಯಕ. ತನ್ನ ಅನುದಾನ ಗಳಿಗಿಂತ ಹೆಚ್ಚು ಸ್ವಂತ ಹಣ ಸಮಾಜಕ್ಕೆ ಧಾರೆಯೆರೆಯುವ ಉದಾರ ಕೊಡುಗೈ ದಾನಿ ! ಇದರಲ್ಲಿ ಯಾವುದೇ ಜಾತಿ ಪಂಥ ಪಕ್ಷ ಅಂತ ಬೇಧ ಭಾವ ಇರುವುದಿಲ್ಲ.
ಇತ್ತೀಚಿಗೆ ಪವಿತ್ರ ಹಜ್ ಯಾತ್ರೆಗೆ ಹೋಗುವ ಎಲ್ಲಾ ಯಾತ್ರಾರ್ಥಿಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆ, ಸೌಕರ್ಯ ಗಳನ್ನು ಒದಗಿಸುವ ಮೂಲಕ ಸಚಿವ ಝಮೀರ್ ಅಹ್ಮದ್ ರವರು ತನ್ನ ಸಚಿವ ಖಾತೆಗೆ ಗೌರವ ನೀಡುವುದರೊಂದಿಗೆ ತಾನು ನಿಜವಾದ ಜನ ಸೇವಕ ಎಂಬುದನ್ನು ಮಾಡಿ ತೋರಿಸಿಕೊಟ್ಟಿದ್ದಾರೆ.
ಸಚಿವ ಝಮೀರ್ ಅಹ್ಮದ್ ಖಾನ್ ರವರ ಈ ಸೇವೆಯ ಬಗ್ಗೆ ಹೇಳಲು ಹಜ್ ತೆರಳಿದ ಹಾಜಿಗಳಿಗೆ ನೂರು ನಾಲಗೆ,ಅಂದರೆ ಸಚಿವರ ಸೇವೆಗಳನ್ನು ಬಣ್ಣಿಸಲು ಪದಗಳೇ ಇಲ್ಲ !!! ಅವರಿಗೆ ಬೇಕಾದ ಊಟೋಪಚಾರ,ಚಹಾ ಎಲ್ಲವನ್ನೂ ತನ್ನ ಸ್ವಂತ ಖರ್ಚಿನಲ್ಲಿ ಮಾಡಿ ಕೊಟ್ಟಿದ್ದಾರೆ. ಹಜ್ ನಿಂದ ಬಂದ ಹಲವಾರು ಮಂದಿ ಹಾಜಿಗಳು ಸಚಿವ ಝಮೀರ್ ಅಹ್ಮದ್ ರವರ ಈ ಅಮೂಲ್ಯ ಸೇವೆಯನ್ನು ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ಹಂಚಿಕೊಂಡಿದ್ದಾರೆ.
ಝಮೀರ್ ಅಹ್ಮದ್ ಖಾನ್ ರವರಿಗೆ ಅಲ್ಲಾಹು ದೀರ್ಘಾಯುಷ್ಯ, ಆಯುರಾರೋಗ್ಯ ಕೊಡಲು ಹಾಗೂ ಇನ್ನಷ್ಟು ಸೇವೆ ಗಳನ್ನು ಮಾಡಲು ಉನ್ನತ ಇನ್ನಷ್ಟು ಪದವಿ ಲಭಿಸಲು ಆತ್ಮಾರ್ಥ ವಾಗಿ ದುಆಃ ಮಾಡಬೇಕೆಂಬುದು ಅವರೆಲ್ಲರ ಕೋರಿಕೆ. ಎಲ್ಲಾ ಸತ್ಯವಿಶ್ವಾಸಿಗಳು ಕೂಡ ನಮ್ಮ ಅಭಿಮಾನದ ಸಚಿವ ಝಮೀರ್ ಅಹ್ಮದ್ ಖಾನ್ ರವರಿಗೆ ಮನದುಂಬಿ ಪ್ರಾರ್ಥಿಸಬೇಕು.
ಇವರು ಮುಖ್ಯಮಂತ್ರಿ ಆಗಿ ರಾಜ್ಯವನ್ನು ಆಳುವುದಾದರೆ ಕರ್ನಾಟಕ ಸಮಗ್ರ ಅಭಿವೃದ್ಧಿ ಪರ್ವ ತಲುಪುವುದರಲ್ಲಿ ಸಂಶಯವಿಲ್ಲ. ನಮ್ಮೆಲ್ಲರ ಪ್ರೀತಿಯ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ರವರಿಗೆ ಅಲ್ಲಾಹು ಇನ್ನಷ್ಟು ಸಂಪತ್ತು, ಐಶ್ವರ್ಯ, ಸಕಲವನ್ನೂ ನೀಡಲಿ ಎಂದು ಪ್ರಪಂಚದ ಸೃಷ್ಟಿಕರ್ತ ಕರುಣಾನಿಧಿ ಅಲ್ಲಾಹುವಿನಲ್ಲಿ ಮನಬಿಚ್ಚಿ ಪ್ರಾರ್ಥಿಸುತ್ತಿದ್ದೇನೆ.
ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರು, ಸ್ಥಾಪಕಾಧ್ಯಕ್ಷರು, ಬಂಧುತ್ವ ಚಾರಿಟೇಬಲ್ ಟ್ರಸ್ಟ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.