ಮಂಗಳೂರು (www.vknews. in) ; ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಲವಾರು ಕುಟುಂಬಗಳು ಪವಿತ್ರ ಹಜ್ಜ್ ಯಾತ್ರೆಗೆ ತೆರಳಿದ್ದು,ಯಾತ್ರಿಗಳು ವಿವಿಧ ಸವಲತ್ತುಗಳಿಂದ ವಂಚಿತರಾಗಿ ವಿಪರೀತ ಯಾತನೆಗೊಳಪಟ್ಟ ಬಗ್ಗೆ ವರದಿಯಾಗಿದ್ದು,ಹಜ್ಜ್ ಸಮಿಟಿಯ ನಿರ್ಲಕ್ಷ್ಯ ಧೋರಣೆಯ ಬಗ್ಗೆ ವಿಷಾದಿಸುತ್ತದೆ.ಯಾತ್ರಿಗಳು ಅಪಾರ ಮೊತ್ತ ತೆತ್ತು ಹಜ್ಜ್ ಯಾತ್ರೆ ಕೈಗೊಂಡಿದ್ದು ಹಜ್ಜ್ ಗೆ ತೆರಳಿದ ನಂತರ ಸದ್ರಿ ಸಮಿತಿಯ ತನಗೆ ಸಂಬಂಧವಿಲ್ಲದಂತೆ ವರ್ತಿಸಿದ್ದು ವಿಷಾದನೀಯ.
ಮಹಿಳೆಯರು ,ಹಿರಿಯರು , ಬಿಸಿಲಬೇಗೆಯಿಂದ ನೊಂದಿದ್ದು, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ,ಸೂರಿನ ವ್ಯವಸ್ಥೆ ಇಲ್ಲದೇ ಹಲವಾರು ದೂರ ಕಾಲ್ನಡಿಗೆಯಿಂದಲೇ ಸಾಗಬೇಕಾದ ಪರಿಸ್ಥಿತಿ ಒದಗಿರುವುದಲ್ಲದೇ ಯಾತ್ರಿಗಳ ಬಗ್ಗೆ ಮಾರ್ಗದರ್ಶಕರು ಇಲ್ಲದೇ ಇರುವುದು ವಿಷಾದನೀಯ ಎಂದರು. ಯಾತ್ರೆ ತೆರಳುವಾಗ ಹಲವಾರು ಮುಖಂಡರು,ರಾಜಕೀಯ ನಾಯಕರು ಸಂಭ್ರಮದಿಂದ ಬೀಳ್ಕೊಡುಗೆ ಮಾಡುತ್ತಿದ್ದು,ಹಜ್ ಯಾತ್ರಿಗಳ ಸ್ವಾಗತಕ್ಕೆ ಏಕೆ ಸಜ್ಜಾಗಿಲ್ಲ?ಎಂಬ ಬಗ್ಗೆ ಪ್ರಶ್ನಿಸಿದ ಅವರು,ಯಾತ್ರಿಗಳು ತಮ್ಮ ಯಾತನೆಗಳನ್ನು ತೋರ್ಪಡಿಸಿದರು ಎಂಬ ಮುಜುಗರಕ್ಕೊಳಪಡಿಸಬಹುದು ಎಂದು ಸಂಖಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಶ್ರೀ ಅಬ್ದುರ್ರಹ್ಮಾನ್ ಸಿ ನೇತೃತ್ವದಲ್ಲಿ ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ ಮೂಡುಬಿದರೆ ಮುಸ್ಲಿಂ ಲೀಗ್ ಗ್ರಾಮ ಪಂಚಾಯತ್ ಸದಸ್ಯ ಎಂ ಎ ಅಶ್ರಫ್ , ಬಶೀರ್ ಉಳ್ಳಾಲ ,ನೌಶಾದ್ ಮಲಾರ್ , ಹಾಜಿ ಅಬ್ದುಲ್ ಖಾದರ್ , ಹಾಜಿ ಅಬ್ದುಲ್ ರಹ್ಮಾನ್ ಮತ್ತು ಸಯ್ಯಿದ್ ಬಂಗೇರುಕಟ್ಟೆ ಶಬೀರ್ ತಲಪಾಡಿ ಮೊದಲಾದವರ ನಿಯೋಗವೊಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಪದಾಧಿಕಾರಿಗಳನ್ನು ಭೇಟಿಯಾಗಿ ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಿರುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.