ಬಂಟ್ವಾಳ (www.vknews. in) : ಬಿ ಸಿ ರೋಡಿನ ಚಿಕೋರಿ ಹೋಟೆಲ್ ಬಳಿ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿ ಕಸಬಾ ಗ್ರಾಮದ ನಿವಾಸಿ ಪವನ ಕುಮಾರ (30) ಅವರು ಜೂನ್ 29 ರಂದು ಮಂಗಳೂರಿಗೆ ಬೈಕಿನಲ್ಲಿ ಕೆಲಸಕ್ಕೆ ಹೋಗಿ, ರಾತ್ರಿ ಹಿಂತಿರುಗಿ ಬಂದು ಬಿ ಸಿ ರೋಡಿನಲ್ಲಿರುವ ಚಿಕೋರಿ ಹೋಟೆಲ್ ಬಳಿ ತನ್ನ ಕೆಎ70 ಇ-7129 ನೋಂದಣಿ ಸಂಖ್ಯೆಯ ಯಮಹಾ ಎಫ್ ಝಡ್ ಬೈಕನ್ನು ನಿಲ್ಲಿಸಿ, ಊಟ ಮುಗಿಸಿ ವಾಪಾಸ್ಸು ಬರುವಷ್ಟರಲ್ಲಿ ಬೈಕ್ ಕಳವಾಗಿದೆ.
ಕಳವಾಗಿರುವ ಬೈಕ್ ಮೌಲ್ಯ 70 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಳವಾಗಿರುವ ಬೈಕ್ ಹುಡುಕಿದರೂ ಸಿಗದ ಹಿನ್ನಲೆಯಲ್ಲಿ ಈ ಬಗ್ಗೆ ಪವನ್ ಕುಮಾರ್ ಅವರು ಭಾನುವಾರ (ಜುಲೈ 7) ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.