(www.vknews. in) ಬಂಟ್ವಾಳ : ಸ್ಕೂಟರ್ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಗಾಯಗೊಂಡು ಅಸ್ಪತ್ರೆಗೆ ದಾಖಲಾದ ಘಟನೆ ಸಜಿಪನಡು ಗ್ರಾಮದ ಸುರಭಿ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಶನಿವಾರ ಸಂಜೆ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಝರೀನಾ ಎಂದು ಹೆಸರಿಸಲಾಗಿದೆ. ಆರೋಪಿ ಸ್ಕೂಟರ್ ಸವಾರನನ್ನು ಧನಂಜಯ ಎಂದು ಹೆಸರಿಸಲಾಗಿದೆ. ದನಂಜಯ ಅವರು ಶನಿವಾರ ಸಂಜೆ ಸ್ಕೂಟರಿನಲ್ಲಿ ಮುಡಿಪು-ಮೆಲ್ಕಾರ್ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವೇಳೆ ಸಜಿಪನಡು ಗ್ರಾಮದ ಮಾರ್ನಬೈಲು ಸಮೀಪದ ಸುರಭಿ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ರಸ್ತೆ ದಾಟುತ್ತಿದ್ದ ಝರೀನಾ ಅವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಗಾಯಗೊಂಡ ಝರೀನಾ ಅವರನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಜಿಪನಡು ನಿವಾಸಿ ವಿವೇಕಾನಂದ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.