ದುಬೈ (www.vknews.in) : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕೇಂದ್ರ ಸಮಿತಿ 30 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹೊಸ್ತಿಲಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ಯಲ್ಲಿ ಪ್ರಾರಂಭಗೊಂಡು 25 ವರ್ಷಗಳನ್ನು ಪೂರ್ತಿಗೊಳಿಸುವ ಈ ಸಂದರ್ಭದಲ್ಲಿ ಈ ವರ್ಷದ 12 ತಿಂಗಳು ವಿವಿಧ ಸಾಮಾಜಿಕ ಧಾರ್ಮಿಕ ಹಾಗು ಇನ್ನಿತರ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ನಡೆಸುತ್ತಿದ್ದು, ಜುಲೈ ತಿಂಗಳ ಕಾರ್ಯಕ್ರಮವಾಗಿ ಬ್ರಹತ್ ಅರೋಗ್ಯ ತಪಾಸಣಾ ಶಿಬಿರ ವನ್ನು ARINCARE ಮೆಡಿಕಲ್ ಸೆಂಟರ್ ದುಬೈ ಅವರ ಸಹಕಾರದೊಂದಿಗೆ ಮೆಡಿಕಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಶೇಷವಾಗಿ ಈ ಶಿಬಿರದಲ್ಲಿ ಡೆಂಟಲ್, ಹೋಮಿಯೋಪತಿ, ಆಯುರ್ವೇದಿಕ್, ಕಣ್ಣಿನ ಟೆಸ್ಟ್ ವ್ಯವಸ್ಥೆಗಳನ್ನು ಮಾಡಿದ್ದು ಶಿಬಿರಕ್ಕೆ ಆಗಮಿಸಿದವರು ಇದರ ಪ್ರಯೋಜನವನ್ನು ಪಡೆದರು. ಕಾರ್ಯಕ್ರಮವನ್ನು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಕಾರ್ಯಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಜಿಪ ರವರ ಅದ್ಯಕ್ಷತೆಯಲ್ಲಿ, ಸಯ್ಯದ್ ತ್ವಾಹ ಬಾಪಾಕಿ ತಂಘಳ್ ರವರು ದುವಾದೊಂದಿಗೆ ಚಾಲನೆ ನೀಡಿದರು. ಬೆಳಿಗ್ಗೆ 9 ರಿಂದ ಪ್ರಾರಂಭಗೊಂಡ ಅರೋಗ್ಯ ತಪಾಸಣಾ ಶಿಬಿರವು ಸಾಯಂಕಾಲ 5 .30 ರವರಿಗೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಪ್ರದಾನ ಕಾರ್ಯದರ್ಶಿ ಯೂಸುಫ್ ಆರ್ಲಪದವು ಸ್ವಾಗತಿಸಿ, ಡಿ.ಕೆ.ಎಸ್.ಸಿ ಯು.ಎ.ಇ ಸಿಲ್ವರ್ ಜುಬಿಲಿ ಕಮಿಟಿ ಜನರಲ್ ಕನ್ವಿನರ್ ಎಂ.ಇ.ಸುಲೈಮಾನ್ ರವರು ಡಿ.ಕೆ.ಎಸ್.ಸಿ ಯ ಪ್ರವರ್ತನೆಯ ವಿವರಣೆಯೊಂದಿಗೆ ಈ ಶಿಬಿರವನ್ನು ನಡೆಸಲು ಸಹಕರಿಸಿದ ARINCARE ಮೆಡಿಕಲ್ ಸೆಂಟರ್ ಇದರ ಮೆನೇಜರ್ ನಿಖಿಲ್, ವೈದ್ಯರುಗಳು, ಸಿಬಂದಿಗಳು ಎಲ್ಲರಿಗು ಕ್ರತಜ್ಞತೆಯನ್ನು ಅರ್ಪಿಸುವುದರೊಂದಿಗೆ ಶುಭ ಹಾರೈಸಿದರು.
ಮೆಡಿಕಲ್ ಸೆಂಟರ್ ಇದರ ಮೆನೇಜರ್ ನಿಖಿಲ್ ರವರು ಈ ಶಿರವನ್ನು ಸಂಘಟಿಸಿದ ಡಿ.ಕೆ.ಎಸ್.ಸಿ ಯ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ವಿಗೆ ಸಿಲ್ವರ್ ಜುಬಿಲಿ ಉಪಾಧ್ಯಕ್ಷರಾದ ನವಾಜ್ ಕೋಟೆಕ್ಕಾರ್, ಸಿದ್ದಿಕ್ ಉಳ್ಳಾಲ, ಸಮದ್ ಬಿರಾಳಿ, ಸಮೀರ್ ಕೊಳ್ನಾಡ್, ನಜಿರ್ ಕುಪ್ಪಟ್ಟಿ, ಅಶ್ರಫ್ ಸತ್ತಿಕಲ್, ಕಮರುದ್ದೀನ್ ಗುರುಪುರ, ಅಬ್ದುಲ್ಲಾ ಪೆರುವಾಯಿ, ಲತೀಫ್ ತಿಂಗಳಾಡಿ, ರಫೀಕ್ ಸತ್ತಿಕಲ್, ವಿಕೆ ನ್ಯೂಸ್ ಪ್ರಧಾನ ಸಂಪಾದಕರಾದ ಸಿ.ಎಚ್ ಅಬ್ದುಲ್ ಹಮೀದ್ ಆಗಮಿಸಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.