(www.vknews. in) ; ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ವತಿಯಿಂದ 2024 ರ ಸದಸ್ಯತ್ವ ಅಭಿಯಾನದ ಅಂಗವಾಗಿ ಬದಲಾವಣೆಯ ಭಾಗವಾಗಿರಿ ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ಕಾರ್ಯಗಾರ ಕಾರ್ಯಕ್ರಮ ದಿನಾಂಕ 02/08/2024 ಶುಕ್ರವಾರ ಜುಮಾ ನಮಾಝಿನ ನಂತರ ಸಾಲ್ಮಿಯ ಸುನ್ನಿ ಸೆಂಟರ್ ಹಾಲ್ ನಲ್ಲಿ ಕೆಸಿಎಫ್ ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರಾದ ಉಮರ್ ಫಾರೂಕ್ ಸಖಾಫಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು.
ಸದಸ್ಯತ್ವ ಅಭಿಯಾನದ ಬಗ್ಗೆ ಕೆಸಿಎಫ್ I C ಸಂಘಟನಾ ಕಾರ್ಯದರ್ಶಿ ಹಾಫಿಲ್ ಉಮರ್ ಫಾರೂಕ್ ಸಖಾಫಿ ಹಾಗೂ ಕೆಸಿಎಫ್ I C ಕಾರ್ಯಕಾರಿ ಸದಸ್ಯ ಜನಾಬ್ ಝಕರಿಯಾ ಆನೆಕಲ್ ಉತ್ತಮವಾಗಿ ತರಗತಿ ನಡೆಸಿಕೊಟ್ಟರು.ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಕುವೈಟ್ ಫೈನಾನ್ಸ್ ಕಂಟ್ರೋಲ್ ಜನಾಬ್ ಮೂಸ ಇಬ್ರಾಹಿಮ್ ನಡೆಸಿದರು.ಆಶಂಷ ಭಾಷಣವನ್ನು ಕೆಸಿಎಫ್ ಕುವೈಟ್ ಅಧ್ಯಕ್ಷರಾದ ಹುಸೈನ್ ಎರ್ಮಾಡ್ ಉಸ್ತಾದರು ನಡೆಸಿದರು.ಕೊನೆಯಲ್ಲಿ ದುವಾ ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸಖಾಫಿ ನಡೆಸಿದರು.ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕರು,ಝೋನ್ ,ಸೆಕ್ಟರ್ ನಾಯಕರು ಭಾಗವಹಿಸಿದರು.
ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ ಸ್ವಾಗತಿಸಿದರು.ಕೆಸಿಎಫ್ ಕುವೈಟ್ ಝೋನ್ ಸಂಘಟನಾ ಕಾರ್ಯದರ್ಶಿ ಹಸೈನಾರ್ ಮೊಂಟೆಪದವು ಧನ್ಯವಾದಗೈದರು.
ವರದಿ :ಪ್ರಚಾರ ಮತ್ತು ಪ್ರಕಾಶನ ವಿಭಾಗ ಕೆಸಿಎಫ್ ಕುವೈಟ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.