(www.vknews.in) : ಬಿಜೆಪಿ ಹಾಗೂ ಸಂಘ ಪರಿವಾರದ ಕೃಪಾಕಟಾಕ್ಷದಿಂದ, ಈ ಹಿಂದೆ ನೇಮಕಗೊಂಡ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯನ್ನು ಮುಂದುವರಿಸಿರುವ ಔಚಿತ್ಯವನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ತಿಳಿಸಬೇಕು.ಇದು ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರ ಹಾಗೂ ಬಿಜೆಪಿ ನಾಯಕರ ನಡುವಿನ ಒಳ ಒಪ್ಪಂದವೇ..? ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡುವ ಅನ್ಯಾಯವಲ್ಲವೇ…? ಈ ಅನ್ಯಾಯದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಅನಿವಾರ್ಯವಾದಿತು.
ಬಿಜೆಪಿ ಸರಕಾರದಿಂದ ನಾಮ ನಿರ್ದೇಶನ ಮಾಡಲ್ಪಟ್ಟಂತಹ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯನ್ನು, ಇನ್ನೂ ಕೂಡ, ಕಾಂಗ್ರೆಸ್ ಸರಕಾರ ಮುಂದುವರಿಸಿ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರ ಅನುಭವಿಸಲು, ಅವಕಾಶವನ್ನು ಕಲ್ಪಿಸಿ, ಪಕ್ಷಕ್ಕಾಗಿ ರಾತ್ರಿ ಹಗಲು ದುಡಿಯುತ್ತಿರುವ,ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಮಾಡಿದೆ.
ಕಾಂಗ್ರೆಸ್ ಸರಕಾರದಿಂದ ಈ ಹಿಂದೆ, ನೇಮಕಗೊಂಡ ಕನಚೂರು ಮೋನು ಹಾಜಿ ನೇತೃತ್ವದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯನ್ನು, ಕಳೆದ ಬಾರಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರವು ರದ್ದುಪಡಿಸಿದಾಗ, ಅದರ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯವು ತಡೆ ನೀಡಿದರೂ, ಅಂದಿನ ಹಾಗೂ ಇಂದು ಕಾರ್ಯನಿರ್ವಹಿಸುತ್ತಿರುವ ವಕ್ಪ್ ಅಧಿಕಾರಿ ಅಬೂಬಕ್ಕರ್ ಹಾಜಿಯವರು, ಕಣಚೂರು ಮೋನು ಹಾಜಿಯವರ ನೇತೃತ್ವದ ಜಿಲ್ಲಾ ವಕಪ್ ಸಮಿತಿಗೆ, ಒಂದೇ ಒಂದು ಮೀಟಿಂಗನ್ನು ಮಾಡಲು ಅನುವು ನೀಡಲಿಲ್ಲ. ಮಾತ್ರವಲ್ಲ ಈ ಬಗ್ಗೆ ಕಾರಣ ಕೇಳಿದಾಗ ಸರಕಾರದ ಕಡೆಯಿಂದ ಸಮಿತಿ ಸಭೆ ನಡೆಸದಂತೆ ಸೂಚನೆ ಇರುವುದಾಗಿ ತಿಳಿಸಿದ್ದರು. ಇವತ್ತು ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರದ ಆಶಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಾ, ಮೋದಿಯವರ ಅಪ್ಪಟ ಅಭಿಮಾನಿಗಳು, ಹಿಂದಿನ ಬಿಜೆಪಿ ಸರಕಾರದಿಂದ ನೇಮಕಗೊಂಡವರನ್ನು, ರದ್ದುಗೊಳಿಸದೆ ಅಥವಾ ಅವರು ತಂದ ತಡೆಯಜ್ಞೆಯನ್ನು ತೆರವು ಗೊಳಿಸುವ,ಯಾವುದೇ ಪ್ರಯತ್ನವನ್ನು ಮಾಡದೆ, ಬಿಜೆಪಿಗರಿಗೆ ವಕಪ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರ ಕೋಟೆಯಲ್ಲಿ ಒಂದಾಗಿದೆ. ಇಲ್ಲಿಯ ಪ್ರತಿನಿತ್ಯ ಮುಸಲ್ಮಾನರು, ಸಂಘ ಪರಿವಾರದಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಎಲ್ಲರೂ ಬಲ್ಲವರಾಗಿರುತ್ತಾರೆ. ಒಂದು ಕಡೆ ಬಿಜೆಪಿಗರಿಂದ ನೇರ ಹೋರಾಟ ಮಾಡುವ ಅನಿವಾರ್ಯತೆ, ಮತ್ತೊಂದು ಕಡೆ ಸಂಘ ಪರಿವಾರಕ್ಕೆ ಪೂರಕವಾಗಿರುವ ವ್ಯಕ್ತಿಗಳ ವಿರುದ್ಧ ಹೋರಾಟ ಮಾಡಬೇಕಾದಂತಹ ಅಗತ್ಯತೆ, ಇಲ್ಲಿರುತ್ತದೆ. ವಾಸ್ತವಾಂಶ,ಹೀಗಿರುವಾಗ ಮುಸ್ಲಿಮರ ಅವಿಭಾಜ್ಯ ಅಂಗವಾದ,ಮಸ್ಜಿದ್, ಮದರಸ, ಕಬರ್ ಸ್ಥಾನ, ಈದ್ಗಾ ಮೈದಾನ, ಮದುವೆ ಪ್ರಮಾಣ ಪತ್ರ ಮೊದಲಾದ ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತಿರುವ ವಕಪ್ ಸಂಸ್ಥೆಯ ನೇತೃತ್ವವನ್ನು, ಸಂಘ ಪರಿವಾರಕ್ಕೆ ಪೂರಕವಾದವರನ್ನು ಹಾಗೂ ಪ್ರಭಾವಿ ಸಂಘ ಪರಿವಾರದ ನಾಯಕರಾದ ಕಲ್ಲಡ್ಕವರ ಕೃಪೆಯಿಂದ ನೇಮಕವಾದ ವರಿಗೆ ಅವಕಾಶ ಪುನಃ ಕಲ್ಪಿಸಿದರೆ. ಸಮುದಾಯದ ಗತಿ ಏನಾಗಬೇಕು . ಪಕ್ಷವನ್ನು ನಂಬಿದ ಅಸಂಖ್ಯಾತ ಮುಸಲ್ಮಾನರ ಗತಿ ಏನಾಗಬೇಕು..?
ಕಾಂಗ್ರೆಸ್ ಸರಕಾರ ಬಂದರು ಬಿಜೆಪಿಗೆರೆ ಅಧಿಕಾರ ನಡೆಸುವುದಾದರೆ ಮುಸಲ್ಮಾನರು ಕಾಂಗ್ರೆಸ್ಸಿಗೆ ಮತ ಹಾಕುವ ಅಗತ್ಯತೆ ಯಾಕಿತ್ತು …?. ಮತ್ತು ಈ ವಿಚಾರದಲ್ಲಿ, ಕೇರಳದ ಮಹಾನರಿಂದ, ನಮ್ಮ ಜಿಲ್ಲೆಯ ಕಾಂಗ್ರೆಸ್ ಸರಕಾರದಲ್ಲಿ ಪ್ರಭಾವಿ ಯಾದ ನಾಯಕರಿಗೆ, ಹೀಗಿರುವ ವಕಪ್, ಅಧ್ಯಕ್ಷರನ್ನು ಯಾವುದೇ ಕಾರಣಕ್ಕೂ ಬದಲಾಯಿಸಿಸದಂತೆ ಒತ್ತಡ ಬಂದಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿದಿದೆ. ಆದುದರಿಂದ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾಂಗ್ರೆಸ್ ಸರಕಾರಕ್ಕೆ ತಿಳಿಸುವುದು ಇಷ್ಟೇ. ಕೂಡಲೇ ಈಗ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯನ್ನು ಕೂಡಲೇ ರದ್ದುಪಡಿಸಿ, ಹೊಸ ಸಮಿತಿಯನ್ನು ನೇಮಿಸುವುದರ ಮೂಲಕ, ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕೆಂದು ಕಳೆದ ಬಾರಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿತ್ತು.ಆದರೆ ಇದುವರೆಗೆ ಕಾಂಗ್ರೆಸ್ ಕಾರ್ಯಕರ್ತರ ನೋವಿಗೆ ಯಾವುದೇ ಫಲ ಸಿಕ್ಕಿಲ್ಲ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಸಹಜವಾಗಿ ಅಸಮಾಧಾನ ಉಂಟಾಗಿದೆ. ಇದು ಯಾವ ರೀತಿ ಮುಂದಕ್ಕೆ ಸ್ಪೋಟಗೊಳ್ಳುತ್ತದೆ ಎಂದು ಗೊತ್ತಿಲ್ಲ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.