(www.vknews.in) : ಬುರೂಜ್ ಇಂಗ್ಲಿಷ್ ಮೀಡಿಯಂ ವಿದ್ಯಾಸಂಸ್ಥೆಎಂಬ ಹೆಸರು ಕೇಳಿದೊಡನೆ ಮನದಲ್ಲಿ ಮೂಡೋದು ಅದೊಂದು ಪ್ರತಿಭೆಗಳ ಅನಾವರಣದ ಕೇಂದ್ರವೆಂದು, ಅದಕ್ಕಾಗಿಯೇ ಅವೆಷ್ಟೋ ಪೋಷಕರು ತಮ್ಮಯ ಮಕ್ಕಳನ್ನು ವಿದ್ಯಾಕೇಂದ್ರಕ್ಕೆ ದಾಖಲಾತಿ ಮಾಡಿದ್ದೂ ಇದೆ… ಇಂತಹ ವಿದ್ಯಾರ್ಥಿಪ್ರೇರಿತ ವಿದ್ಯಾ ಕೇಂದ್ರದಲ್ಲಿ ಶಿಕ್ಷಕರುಗಳೂ ಕೂಡಾ ಪ್ರತಿಭೆಗಳ ಅನಾವರಣದ ದಾರಿಯಲೇ ಮುನ್ನುಗ್ಗುತ್ತಿರುವುದು ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ವಪ್ರೇರಿತರಾಗುವಲ್ಲಿ ಸಹಾಯಕವಾಗುತ್ತಿರುವುದು ಸುಳ್ಳಲ್ಲ.
ಅಂತಹಾ ಪ್ರತಿಭೆಗಳಲ್ಲಿ ಇದೀಗ ಮುಂಚೂಣಿಗೆ ಬಂದಿರೋ ಹೆಸರು ಬುರೂಜ್ ವಿದ್ಯಾಸಂಸ್ಥೆಯಲ್ಲಿ ಸುಪರ್ವೈಝರ್ ಆಗಿ ಕಾರ್ಯನಿರ್ವಹಿಸುತ್ತಿರೋ ಇರ್ವತ್ತೂರು ಎಂಬ ಗ್ರಾಮದ ಎಡ್ತೂರ್ ಪದವಿನ ರಝಿಯಾ ಎಸ್.ಪಿ..
ತನ್ನ ಬಿಡುವಿನ ಸಮಯದಲ್ಲಿ ವಾರ್ತಾ ಮಾಧ್ಯಮದಲ್ಲೂ ತನ್ನ ಛಾಪನ್ನು ಮೂಡಿಸಿ, ಆ ಅದ್ಭುತ ಕಂಠದಲ್ಲಿ ಆಯಾ ಸಮಯಕ್ಕೆ ತಕ್ಕಂತೆ ಕವನಗಳು ರಚಿಸಿ ಹಾಡುತ್ತಿರುವ, ಕೇಳುತ್ತಿರುವ ಕೇಳುಗರ ಹಾವಭಾವ ಬದಲಾಯಿಸೋ ಶಕ್ತಿಯುಳ್ಳ ಆ ಧ್ವನಿಯು ಇನ್ನಷ್ಟು ರಾರಾಜಿಸಿ ಹುಟ್ಟಿರೋ ಮನೆಗೆ, ಬೆಳೆದಿರೋ ಊರಿಗೆ, ಕಾರ್ಯನಿರ್ವಹಿಸುತ್ತಿರೋ ಸಂಸ್ಥೆಗೆ ಹಾಗೆಯೇ ಆಶ್ರಯ ನೀಡಿರೋ ಭಾರತ ದೇಶಕೆ ಉತ್ತಮ ಹೆಸರನ್ನು ತಂದುಕೊಡಲಿ ಎಂದು ಹಾರೈಸೋಣ.
✒ SRB.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.