(www.vknews. in) ; ಕಲ್ಲಡ್ಕ ಗೋಳ್ತಮಜಲು ಶಂಸುಲ್ ಉಲಮ ಮಹಿಳಾ ಕಾಲೇಜು ವಿದ್ಯಾರ್ಥಿ ಪರಿಷತ್ತು ಉದ್ಘಾಟನಾ ಕಾರ್ಯಕ್ರಮವು ಶನಿವಾರ ದಿನಾಂಕ 10 ಆಗಸ್ಟ್ 2024 ರಂದು ಸಂಸ್ಥೆಯ ಅಧ್ಯಕ್ಷರಾದ ಅಹಮದ್ ಮುಸ್ತಫಾ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲೆಯ ವೈದ್ಯಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಟ್ಟ ನಾಲ್ಕು ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಮಂಗಳೂರು ನರಿಂಗನ ಯಾನಪೊಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಇದರ ವಿದ್ಯಾರ್ಥಿ ಪರಿಷತ್ತು ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚಿಗೆ ಆಯ್ಕೆಯಾದ ಐಫತ್ ನಿಶಾ ಕೋಲ್ಪೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧಾರ್ಮಿಕ ಮತ್ತು ಮನೋವಿಜ್ಞಾನ ದೃಷ್ಟಿಯಲ್ಲಿ ನಾಯಕತ್ವ ಎಂಬ ವಿಷಯ ಮಂಡಿಸಿ ಮಂಡಿಸಿ ಎಲ್ಲರ ಗಮನ ಸೆಳೆದರು.
ಸಂಸ್ಥೆಯ ಉಪನ್ಯಾಸಕರು ನೂತನ ಸಂಶಿಯ್ಯ ಪರಿಷತ್ತು ಪದಾಧಿಕಾರಿಗಳು ಇವರ ಶಿಕ್ಷಣದ ಮೇಲಿನ ಅಪರಿಮಿತವಾದ ಆಸಕ್ತಿ ಮತ್ತು ನಾಯಕತ್ವವನ್ನು ಗುರುತಿಸಿ ಸನ್ಮಾನಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.