(www.vknews. in) ; ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ತುಳುನಾಡ ವೈಭವ ತುಳುವ ಸಂಸ್ಕೃತಿಯ ಬಿಂಬಿಸುವ ತುಳು ಆಚರಣೆ *”ಆಟಿದ ಗಮ್ಮತ್ತ್”* ಕಾರ್ಯಕ್ರಮ ನಡೆಯಿತು. ಪ್ರಾರ್ಥನೆ ಮುಖಾಂತರ ಆರಂಭವಾಗಿ ಅತಿಥಿಗಳು ಪರಸ್ಪರ ಮುಟ್ಟಾಳೆ ಧರಿಸುವುದರ ಮೂಲಕ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಮದಪದವು ವಲಯ ಮಟ್ಟದ ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷರಾದ ಆನಂದ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಜೈನ್, ವರದಿಗಾರ ಶಬೀರ್ ಅಹ್ಮದ್,ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಮುಖ್ಯ ಶಿಕ್ಷಕಿ ಜಯಶ್ರೀ.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನೃತ್ಯ,ಗಾದೆ ಮುಖಾಂತರ ವಿದ್ಯಾರ್ಥಿಗಳು ಎಲ್ಲರ ಮನರಂಜಿಸಿದರು. ನಂತರ ವಿದ್ಯಾರ್ಥಿಗಳು ತಂದಂತಹ ಆಟಿ ತಿಂಗಳ ವಿಶೇಷ ಅಡುಗೆಯಾದ ಪತ್ರೊಡೆ, ಉಪ್ಪಡಚ್ಚಿಲ್,ತಂಜಕ್ ದೋಸೆ,ವಿವಿಧ ರೀತಿಯ ಚಟ್ನಿ ಹೀಗೆ ಹಲವಾರು ರೀತಿಯ ತಿಂಡಿ ತಿನಿಸುಗಳನ್ನು ಸವಿಯಲಾಯಿತು. ಹಳೆಯ ಕಾಲದ ಪರಿಕರಗಳನ್ನು ವಸ್ತು ಪ್ರದರ್ಶನಕ್ಕೆ ಇಡಲಾಗಿತ್ತು.ಬಂದಂತಹ ಅತಿಥಿಗಳನ್ನು ವನಿತಾರವರು ಸ್ವಾಗತಿಸಿದರು.ಪವಿತ್ರಾರವರು ಧನ್ಯವಾದ ಸಮರ್ಪಿಸಿದರು. ಎಸ್.ಪಿ. ರಝೀಯ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.