ಉದ್ಯಾವರ (www.vknews.in) : ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವತಿಯಿಂದ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಐಸಿವೈಎಂ ಉದ್ಯಾವರ ಘಟಕದ ನೇತೃತ್ವದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲಾ ವಠಾರ ದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂ. ಫಾ. ಅನಿಲ್ ಡಿಸೋಜಾ ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರು ವo. ಸ್ಟೇಫನ್ ರೊಡ್ರಿಗಸ್, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೇಸ, ಕಾರ್ಯದರ್ಶಿ ಜಾನ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ರೋನಲ್ಡ್ ರೆಬೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐಸಿವೈಎಂ ಅಧ್ಯಕ್ಷ ಗ್ಲ್ಯಾನಿಶ್ ಪಿಂಟೋ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಲ. ಜೆರಾಲ್ಡ್ ಪಿರೇರ ಧನ್ಯವಾದ ಸಮರ್ಪಿಸಿದರು. ಐಸಿವೈಎಂ ಸದಸ್ಯರು ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.