ಉಳ್ಳಾಲ (www.vknews.in) : ಕೆ ಸಿ ರೋಡ್ ತಲಪಾಡಿ ಕೆಎಮ್ ಜೆ.ಎಸ್ ವೈ ಎಸ್.ಎಸ್ಸೆಸ್ಸೆಫ್ ತಲಪಾಡಿ ಸರ್ಕಲ್ ಹಾಗೂ ಕೆ.ಸಿ.ರೋಡ್ ಶಾಖಾ ಸಂಯುಕ್ತ ಆಶ್ರಯದಲ್ಲಿ ಭಾರತದ 78 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಕೆ.ಸಿ.ರೋಡ್ ಜಂಕ್ಷನ್ ನಲ್ಲಿ ಸಂಭ್ರಮದಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಎಸ್ ವೈ ಎಸ್ ತಲಪಾಡಿ ಸರ್ಕಲ್ ಅಧ್ಯಕ್ಷರಾದ ಮುಸ್ತಫಾ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ನಾಯಕರಾದ ಡಾಕ್ಟರ್ ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ ಧ್ವಜಾರೋಹಣ ಮಾಡಿ ಸಂದೇಶ ಭಾಷಣ ನಡೆಸಿದರು. ಕಾರ್ಯಕ್ರಮದಲ್ಲಿ ಸಂಘ ಕುಟುಂಬದ ನಾಯಕರು ಹಾಗೂ ಕೆ.ಸಿ.ರೋಡ್ ನಾಗರಿಕರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ಕೆ.ಸಿ.ರೋಡ್ ಶಾಖಾಧ್ಯಕ್ಷರಾದ ಅನ್ವೀಝ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷರಾದ ಅಸ್ಗರ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.