ಬಂಟ್ವಾಳ (www.vknews. in) : ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಮಸೀದಿಯ ವಠಾರದಲ್ಲಿ ಆಚರಿಸಲಾಯಿತು. ಜಮಾತ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ರವರು ದ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣ ಜಮಾತ್ ಖತೀಬರಾದ ಅಬ್ಬಾಸ್ ಫೈಝಿ ಯವರು ನೀಡಿದರು.
ವೇದಿಕೆಯಲ್ಲಿ ಜಮಾತಿನ ಮುದರ್ರಿಸ್ ಉಮರ್ ಫಾರೂಕ್ ಫೈಝಿ ಉಪಸ್ಥಿತರಿದ್ದರು.ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಮಾತ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗಳು ಹಾಗೂ ಮದರಸದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ವೇದಿಕೆಯಲ್ಲಿ ಎಂಜೆ ಎಂ ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ, ಜಮಾತಿನ ಉಪಾಧ್ಯಕ್ಷರಾದ ಜಮಾಲ್ ಶಾಂತಿಅಂಗಡಿ, ಕಾರ್ಯದರ್ಶಿಗಳಾದ ಕಾರ್ಯದರ್ಶಿ ಆದಂ ಪಲ್ಲ, ಇಕ್ಬಾಲ್ ನಂದರಬೆಟ್ಟು, ಜಮಾತ್ ಕಮಿಟಿ ಸದಸ್ಯರಾದ ಮಹಮ್ಮದ್ ಮಜಲ್, ಹಾಮದ್ ಬಾವ, ಹಮೀದ್ ಕೈಕಂಬ, ಅಮೀರುದ್ದೀನ್, ಎಸ್ ಕೆ ಎಸ್ ಎಸ್ ಬಿಸಿ ರೋಡ್ ಘಟಕದ ಅಧ್ಯಕ್ಷರಾದ ಮುಹ್ ಸಿನ್ ಫೈಝಿ, ನುಸುರತ್ ಮಿಲಾದುನ್ನಬಿ ಸಂಘ ದ ಮಾಜಿ ಅಧ್ಯಕ್ಷರಾದ ಹಮೀದ್ ಪಲ್ಲ ಉಪಸ್ಥಿತರಿದ್ದರು. ಮೂಹಿಯ್ಯು ದ್ದೀನ್ ಮದರಸ ಮದರಸ ಸದರ್ ಉಸ್ತಾದ್ ಇಬ್ರಾಹಿಂ ದಾರಿಮಿ ಕಾರ್ಯಕ್ರಮ ನಿರೂಪಣೆ ಮಾಡಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.