(www.vknews.in) ; ದೇಶದ ಏಕತೆ, ಐಕ್ಯತೆ, ಸಹೋದರತ್ವ, ಸಹಬಾಳ್ವೆ, ಆತ್ಮಾಭಿಮಾನದ ಪ್ರತೀಕವಾದ ಸ್ವಾತಂತ್ರ್ಯೋತ್ಸವ ದಿನವಾದ ಇಂದು, ಬದ್ರಿಯಾ ಜುಮಾ ಮಸ್ಜಿದ್ ಕಲ್ಮಿಂಜ ವತಿಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಪೂಡಲ್ ವಹಿಸಿದ್ದರು. ಜಮಾಅತ್ ಕಾರ್ಯದರ್ಶಿ ಸಿದ್ದೀಖ್ ಕಲ್ಮಿಂಜ ಸ್ವಾಗತಿಸಿದರು. ಕೋಶಾಧಿಕಾರಿಯಾದ ಉಸ್ಮಾನ್ ಹೊಸಮನೆಯವರು ಧ್ವಜಾರೋಹಣಗೈದರು.
ಜಮಾಅತ್ ಖತೀಬರಾದ ಅಬ್ದುರ್ರಹ್ಮಾನ್ ಸಖಾಫಿ ಚಿಪ್ಪಾರ್ ಪ್ರಾಸ್ತಾವಿಕ ಭಾಷಣಗೈದು ದುಆ ನಡೆಸಿದರು. ಸದರ್ ಉಸ್ತಾದರಾದ ಅಬೂಬಕ್ಕರ್ ಅಮಾನಿ ಉಸ್ತಾದ್ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಊರಿನ ಎಲ್ಲಾ ಹಿರಿಯ ಕಿರಿಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.