ಮಂಗಳೂರು (www.vknews.in) : ಶುಕ್ರವಾರ ಬೆಳಗ್ಗೆ ನಗರದ ಬಂದರ್ ನಲ್ಲಿ ಸಂಭವಿಸಿದ ಅಕ್ಟೀವಾ – ಕಾರು ಅಪಘಾತದಲ್ಲಿ ನಗರದ ಬೆಂಗರೆಯ ಖಾಸಗಿ ಶಾಲೆಯ ಶಿಕ್ಷಕಿ ಮೃತಪಟ್ಟಿದ್ದಾರೆ. ಮೂಲತಃ ಪುತ್ತೂರಿನ ಪರ್ಲಡ್ಕ ಸಮೀಪದ ಕುಂಜೂರು ನಿವಾಸಿಯಾಗಿದ್ದ ಪ್ರಸ್ತುತ ಮಂಗಳೂರಿನ ಬೆಂಗರೆ ನಿವಾಸಿಯಾಗಿರುವ ಬಹುಃ ಕೆ.ಪಿ.ಇಸ್ಮಾಯಿಲ್ ಉಸ್ತಾದ್ ರವರ ಮಗಳು ಮತ್ತು ASI ಮುಹಮ್ಮದ್ ಪೋಲಿಸ್ ರವರ ಪತ್ನಿ, ಬೆಂಗರೆಯ ಶಾಲಾ ಶಿಕ್ಷಕಿಯಾಗಿರುವ ಕೆ.ಪಿ.ಶಾಹೀದಾ ಮೃತಪಟ್ಟವರು.
ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಶಾಹಿದಾ ಅವರಿಗೆ ಅನಾರೋಗ್ಯ ಕಾಡಿದ್ದು, ಅಲ್ಲಿಂದ ಮರಳಿ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದಿದೆ. ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.