(www.vknews.in) : ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಸಮೀಪದ ಗೋಲ್ಡನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ನ, ಗೋಲ್ಡನ್ ಇಂಟರ್ ನ್ಯಾಷನಲ್ ಸ್ಕೂಲ್, ಹಾಗೂ ಗೋಲ್ಡನ್ ಇಂಡಿಪೆಂಡೆಂಟ್ ಪಿ.ಯು ಕಾಲೇಜ್ ಸಹಯೋಗದಲ್ಲಿ ಅದ್ದೂರಿಯಾಗಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜರೋಹಣವನ್ನು ಮಾಡಿದ ನೋಕಿಯಾ ಕಂಪನಿಯ ಪ್ರಧಾನ ವಾಸ್ತುಶಿಲ್ಪಿಗಳಾದ ಶ್ರೀ ರಾಜೀವ್ ಶರ್ಮಾ ರವರು ಮಾತನಾಡುತ್ತಾ “ಭಾರತ ದೇಶ ಭವ್ಯಪರಂಪರತೆಯನ್ನು ಹೊಂದಿರುವ ಪ್ರಬುದ್ದ ನೆಲ, ಈ ನೆಲದಲ್ಲಿ ಸುಮಾರು ವರ್ಷಗಳು ಬ್ರಿಟಿಷರ ಕಪಿಮುಷ್ಟಿಯಲ್ಲಿ ನಾವು ಅನುಭವಿಸಿದ ನೋವು, ಯಾತನೆ ಇವುಗಳಿಂದ ಮುಕ್ತಿ ಹೊಂದಿದ ಸುದಿನವೇ ಸ್ವಾತಂತ್ರ್ಯ ದಿನ ಆಗಿದೆ. ಈ ದೇಶದ ಸ್ವಾತಂತ್ರ್ಯ ಪಡೆಯಲು ತಮ್ಮ ದೇಹ ತ್ಯಾಗ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳನ್ನು ಪ್ರತಿ ದಿನವು ಸ್ಮರಿಸುವಂತ ದಿನ ಆಗಬೇಕಾಗಿದೆ. ಅಂಬೇಡ್ಕರ್, ಗಾಂಧಿ, ತಿಲಕ್, ಭಗತ್ ಸಿಂಗ್, ಸರೋಜಿನಿ ನಾಯ್ಡು, ಸುಭಾಷ್ ಚಂದ್ರಬೋಸ್, ಲಾಲಾ ಲಾಜಪತ್ ರಾಯ್, ಇನ್ನೂ ಮುಂತಾದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಪೂಜಿಸಬೇಕು, ಸ್ಮರಿಸಬೇಕು, ಓದಬೇಕು” ಎಂದರು.
ಕಾರ್ಯಕ್ರಮದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷರು ಹಾಗೂ ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಯುವಕವಿ ಲಕ್ಕೂರು ಎಂ.ನಾಗರಾಜ್ ಮಾತನಾಡುತ್ತಾ “ಆಗಸ್ಟ್ 15, 1947… ಅದೆಷ್ಟೋ ಕೆಚ್ಚೆದೆಯ ವೀರರು, ರಾಷ್ಟ್ರ ಪ್ರೇಮಿಗಳು, ಹೋರಾಟಗಾರರು ಕಂಡ ಕನಸು ನನಸಾದ ದಿನ… ಈ ದಿನಕ್ಕಾಗಿ ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ, ಬ್ರಿಟಿಷರ ಗುಂಡೇಟು ತಿಂದಿದ್ದಾರೆ, ರಕ್ತ ಹರಿಸಿದ್ದಾರೆ. ಇವರೆಲ್ಲಾ ತಮ್ಮ ಬದುಕನ್ನೇ ತೇಯ್ದು ಸ್ವಾತಂತ್ರ್ಯದ ಕನಸನ್ನು ಕಂಡಿದ್ದರು. ಈ ಕನಸು ನನಸಾದ ಕ್ಷಣಕ್ಕೆ ಈಗ 78ನೇ ವರ್ಷ ನಾವು ನಮ್ಮ ರಾಷ್ಟ್ರದ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ನಿಮಗೆ ಹೆಮ್ಮೆ ಮತ್ತು ಸಂತೋಷದ ದಿನವನ್ನು ಬಯಸುತ್ತೇವೆ. ಈ ಸ್ವಾತಂತ್ರ್ಯ ದಿನವು ಸ್ವಾತಂತ್ರ್ಯ ಮತ್ತು ಏಕತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ನಮಗೆ ಸ್ಫೂರ್ತಿ ನೀಡಲಿ. ನಮ್ಮ ಶ್ರೀಮಂತ ಪರಂಪರೆಯನ್ನು ಮತ್ತು ನಾವು ಪ್ರೀತಿಸುವ ಸ್ವಾತಂತ್ರ್ಯವನ್ನು ಸದಾ ಆಚರಿಸೋಣ”ಎಂದರು.
ಕಾರ್ಯಕ್ರಮದಲ್ಲಿ ಅದ್ದೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳು, ಮಕ್ಕಳ ಭಾಷಣ, ಪಿರಮಿಡ್ ಎಲ್ಲಾರ ಗಮನ ಸೆಳೆಯಿತು. ಮಕ್ಕಳಿಗೆ ಸಿಹಿ ಹಂಚಿಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೋಲ್ಡನ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ಹುಸ್ನ ಹುಸೇನ್ ಉಪ ಪ್ರಾಂಶುಪಾಲರಾದ ಅಕ್ಬರ್ ಆಲಿ, ಮುಖ್ಯೋಪಾಧ್ಯಯರಾದ ಶ್ರೀಮತಿ ಲಕ್ಷ್ಮಮ್ಮ, ತಬುಸುಂ, ಆಯೇಷಾ, ಹುಜರಾ, ನೇತ್ರಾವತಿ, ಮಹಮ್ಮದ್ ಷರೀಫ್ ಗೋಲ್ಡನ್ ಇಂಡಿಪೆಂಡೆಂಟ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ಶಾಕೀರ್, ಉಪನ್ಯಾಸಕಾರಾದ ವೆಂಕಟೇಶ್, ದಿವ್ಯ, ನವೀನ್, ದೈಹಿಕ ಶಿಕ್ಷಕರಾದ ಶ್ರೀಮತಿ ಪದ್ಮವಾತಿ, ಸಂಪತ್, ಎಲ್ಲಾ ವಿಷಯದ ಸಂಯೋಜಕರು, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಜರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.