ದಾವಣಗೆರೆ (www.vknews.in) : ನಗರದ ವಿವೇಕಾನಂದ ಬಡಾವಣೆಯ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಪತಿ ಮತ್ತು ಮಕ್ಕಳು ಸೇರಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶಿವಮೂರ್ತಿ ಅವರ ಪತ್ನಿ ಸುಮಲತಾ ಮೃತ ಮಹಿಳೆ.
ಶಿವಮೂರ್ತಿ ಅವರ ಮೊದಲನೇ ಪತ್ನಿ ಸಾವನ್ನಪ್ಪಿದ ನಂತರ 12 ವರ್ಷಗಳ ಹಿಂದೆ ಸುಮಲತಾ ಅವರನ್ನು ಮದುವೆಯಾಗಿದ್ದ. ಆದರೆ, ಎರಡನೇ ಮಡದಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಪತಿಯ ಮೊದಲ ಪತ್ನಿಯ ಮೂವರು ಮಕ್ಕಳನ್ನೇ ತನ್ನ ಮಕ್ಕಳು ಎಂಬಂತೆ ಸಾಕಿ ಸಲುಹಿದ್ದರು.
ಸುಮಾಲತಾ ತನ್ನ ಸ್ವಂತ ಮಕ್ಕಳಂತೆ ಮೂವರನ್ನೂ ನೋಡಿಕೊಂಡಿದ್ದರು. ಆದರೆ ಮಕ್ಕಳು ದೊಡ್ಡವರಾದ ಮೇಲೆ ಜಗಳ ಶುರುವಾಗಿದೆ. ಓರ್ವ ಸುಮಲತಾ ಜೊತೆ ಆರು ತಿಂಗಳು ಮಾತು ನಿಲ್ಲಿಸಿದ್ದ. ಮಕ್ಕಳು ದೊಡ್ಡವರಾದ ನಂತರ ಶಿವಮೂರ್ತಿಯು ಕೂಡ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಹೀಗಾಗಿಯೇ ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ ಎಂದು ಸುಮಲತಾ ಅವರ ಸಂಬಂಧಿಕರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.