ಬೆಂಗಳೂರು, ಯಶವಂತಪುರ (www.vknews.in) ; ಕರಾವಳಿ ಐಕ್ಯತಾ ವೇದಿಕೆಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮುಹಮ್ಮದ್ ನಾಸೀರ್ ಅವರು ಅಧ್ಯಕ್ಷತೆಯನ್ನು ವಹಿಸಿದರು.
ನಮ್ಮ ದೇಶವು ಸರ್ವಧರ್ಮಿಯವಾಗಿದ್ದು, ಯಾವುದೇ ಭೇದಭಾವ ಇರಬಾರದು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮೊದಲು ಬಗೆಹರಿಸಬೇಕು ಇದರ ಕುರಿತು ರಾ. ಚಿಂತನ್ (ಸಾಮಾಜಿಕ ಹೋರಾಟಗಾರ,ಪತ್ರಕರ್ತ ಮತ್ತು ಬರಹಗಾರ) ದಿಕ್ಸೂಚಿ ಭಾಷಣ ಹಾಗೂ ಧ್ವಜಾರೋಹಣ ಮಾಡಿದರು.
ಈ ಕಾರ್ಯಕ್ರಮದಲ್ಲಿ ರಾ. ಚಿಂತನ್ ಹಾಗೂ ಸಂಸ್ಥೆಯ ಸಮಾಜಿಕ ಜಾಲತಾಣದ ಮೂಲಕ ಪ್ರಚಾರಕ್ಕೆ ಪಾತ್ರವಹಿಸಿದಂತಹ ರಝಾಕ್ ಪಂಜಾಜೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು. ನಂತರ ಅನ್ನಪೂರ್ಣಿ ಸೇವಾಶ್ರಮದ ಮಕ್ಕಳ ಜೊತೆ ಸಂಸ್ಥೆಯ ಸದಸ್ಯರು ಮದ್ಯಾಹ್ನದ ಊಟ ಸವಿದರು. ವೇದಿಕೆಯಲ್ಲಿ ಸಂಸ್ಥೆಯ ಗೌರಾವಾಧ್ಯಕ್ಷರಾದ ಮುಹಮ್ಮದ್ ರಫಿ, ಉಪಾಧ್ಯಕ್ಷರಾದಂತಹ ಮುಹಮ್ಮದ್ ಅಲಿ ಜೊತೆಗೂಡಿದರು. ಶಾಹಿಕ್ ಮಲಾರ್ ನಿರೂಪಣೆ ಹಾಗೂ ಧನ್ಯವಾದ ತಿಳಿಸಿದರು. ಊರ ನಾಗರಿಕರು, ಸಂಸ್ಥೆಯ ಸದಸ್ಯರು ಭಾಗಿಯಾದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.
ಅಲಿ, ಮೀಡಿಯಾ ವಿಂಗ್*ಕರಾವಳಿ ಐಕ್ಯತಾ ವೇದಿಕೆ ಬೆಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.