ಕೊಡ್ಲಿಪೇಟೆ (www.vknews.in) : “ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ ” ಎಂಬ ಧ್ಯೇಯ ವಾಕ್ಯದೊಂದಿಗೆ, ಆಗಸ್ಟ್ 15 ರಂದು ದೇಶದ 78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹ್ಯಾಂಡ್ ಪೋಸ್ಟ್ ನಲ್ಲಿರುವ ಶಾಖಾ ಕಚೇರಿಯ ಮುಂಭಾಗದಲ್ಲಿ ನಡೆಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಪುರುಷರನ್ನು ಸ್ಮರಿಸಿ, ದೇಶದ ಸೌಹಾರ್ದತೆಯ ಉಳಿವಿಗಾಗಿ, ಜಾತ್ಯಾತೀತ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಎಲ್ಲರೂ ಕೈ ಜೋಡಿಸೋಣ ಎಂಬ ಸಂದೇಶ ಸಾರಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೈಸ್ ಮಿಲ್ ಮಾಲಕರಾದ ಸೋಮಣ್ಣ, ಮಸ್ಜಿದುನ್ನೂರ್ ಖತೀಬರಾದ ಶಾಫಿ ಫೈಝಿ, ಜುಮಾ ಮಸೀದಿ ಅಧ್ಯಕ್ಷರಾದ ಸಿದ್ದೀಕ್ ಹಾಜಿ ಭಾಗವಹಿಸಿದ್ದರು. ಬೇಡಗೊಟ್ಟ ಗ್ರಾಮ ಪಂಚಾಯತಿ ಸದಸ್ಯರಾದ ಹನೀಫ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಜಲ್ಲಿಯಾತ್ ಮದ್ರಸ ಮುಖ್ಯೋಪಾಧ್ಯಾಯರಾದ ರಝಾಕ್ ಫೈಝಿ, ಮದ್ರಸ ಗುರುಗಳಾದ ಸ್ವಾಲಿಹ್ ರಹ್ಮಾನಿ, ನಾಸರ್ ಸಅದಿ, ಎಸ್.ವೈ.ಎಸ್ ಶಾಖಾಧ್ಯಕ್ಷರಾದ ಇಬ್ರಾಹಿಂ ಕೆ. ಎ, ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಕೋಶಾಧಿಕಾರಿ ಬಾಸಿತ್ ಹಾಜಿ, ಆಮಿಲಾ ಉಪಾಧ್ಯಕ್ಷರಾದ ಅಬ್ದುಲ್ ರಹಮಾನ್, ಎಸ್.ವೈ.ಎಸ್ ಕಾರ್ಯದರ್ಶಿ ಮುಹಮ್ಮದ್ ಅಲಿ, ಹಿರಿಯರಾದ ಸುಲೈಮಾನ್ ಹೆಚ್ ಇ, ಮುಹಮ್ಮದ್ ಹಾಗೂ ಸಂಘಟನೆಯ ನಾಯಕರು, ಸದಸ್ಯರುಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.