(www.vknews.in) ; ಸ್ವತಂತ್ರ ಸಂಗ್ರಾಮದ ಇತಿಹಾಸ ಕಲಿಯೋಣ…ಶುಂಟಿಕೊಪ್ಪ ಸಮೀಪದ ಗದ್ದೇಹಳ್ಳ ನೂರಿಯ್ಯ ಮದ್ರಸ ವತಿಯಿಂದ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ಜಮಾಅತ್ ಅಧ್ಯಕ್ಷರಾದ ಬಶೀರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಮದ್ರಸ ಮುಖ್ಯೋಪಾಧ್ಯಾಯರಾದ ಸಮದ್ ಸಖಾಫಿ ಉದ್ಘಾಟಿಸಿದರು.
ಖತೀಬ್ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ ಸಂದೇಶ ಭಾಷಣ ಮಾಡಿ ಪ್ರತಿಜ್ಞಾ ಭೋದನೆ ನಡೆಸಿದರು. ಸ್ವತಂತ್ರಕ್ಕಾಗಿ ಹಗಲಿರುಳೆನ್ನದೆ ಹೋರಾಟ ನಡೆಸಿ ನಮ್ಮ ಕೈಗಳಿಗೆ ಒಂದು ಸುಂದರ ಭಾರತವನ್ನು ತಂದುಕೊಟ್ಟ ಪೂರ್ವಿಕರ ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಮನದಟ್ಟು ಮಾಡುವುದೇ ಈಗಿನ ಅತೀ ದೊಡ್ಡ ದಿನಾಚರಣೆ. ಸರಿಯಾದ ಇತಿಹಾಸವನ್ನು ಕಲಿಯೋಣ, ಕಲಿಸೋಣ. ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಸೈನಾರ್ ಸಖಾಫಿ, ನಿಝಾರ್ ಗದ್ದೇಹಳ್ಳ, ಸೂಫಿ ಮುಸ್ಲಿಯಾರ್ ಹಲವರು ಪಾಲ್ಗೊಂಡರು. ಕೊನೆಯಲ್ಲಿ ಸಿಹಿತಿಂಡಿಗಳನ್ನು ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.