(www.vknews.in) ; ಕೊಡಗಿನ ವಿರಾಜಪೇಟೆಯ ಅನ್ವಾರುಲ್ ಹುದಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅನ್ವಾರುಲ್ ಹುದಾ ಕ್ಯಾಂಪಸ್ನಲ್ಲಿ ಸ್ಥಾಪಕ ಹಾಗೂ ಅಧ್ಯಕ್ಷ ಉಸ್ತಾದ್ ಅಶ್ರಫ್ ಅಹ್ಸನಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಎಪಿಎಸ್ನ ಪಿಟಿಎ ಅಧ್ಯಕ್ಷ ರಫೀಕ್ ಕೊಮ್ಮತೋಡ್ ಮುಖ್ಯ ಭಾಷಣ ಮಾಡಿದರು, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಮುಖ್ಯ ಅತಿಥಿಯಾಗಿದ್ದರು. ಉಸ್ತಾದ್ ರಶೀದ್ ಸಅದಿ, ಉಸ್ತಾದ್ ಇಸ್ಮಾಯಿಲ್ ಸಖಾಫಿ, ಝೈನುದ್ದೀನ್ ಅಬ್ದುಲ್ಲಾ ಅಝ್ಹರಿ ಮಲಪ್ಪುರಂ ಅಬ್ದುರ್ರಹ್ಮಾನ್ ಅಹ್ಸನಿ ಕೊಳಕೇರಿ, ಶಿಹಾಬುದ್ದೀನ್.ಸಿ.ಕೆ, ಯಾಕೂಬ್ ರಝ್ವಿ, ಅಹ್ಮದ್ ಮದನಿ, ಮುಬಶಿರ್ ಅಝ್ಹರಿ, ಶಿಹಾಬುದ್ದೀನ್ ಅನ್ವಾರಿ, ಇಲ್ಯಾಸ್ , APS ಪ್ರಾಂಶುಪಾಲರಾದ ಶಿಹಾಬುದ್ದೀನ್, ಶರಫುದ್ದೀನ್ ಸರ್, ಜುನೈದ್ ಅನ್ವಾರಿ, ಶಿಕ್ಷಕರು, ಪೋಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ರೀ ಶಶಿದರ್ ಸರ್ ರವರು,ದೇಶಪ್ರೇಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೀರ ಹೋರಾಟದ ಸ್ಮರಣೆಯ ಬಾಷಣವನ್ನು ಮಾಡಿದರು.
ವೇದಿಕೆಯಲ್ಲಿ ಸಂಪೂರ್ಣ ಭಾರತದ ಇತಿಹಾಸದ ಕುರಿತು ವಿದ್ಯಾರ್ಥಿಗಳು ರಚಿಸಿದ ಕೈಬರಹ ಮಾಸಿಕವನ್ನು ಪ್ರಕಾಶನಗೈದರು. ಕಾಯ೯ಕ್ರಮವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಅನುಗುಣವಾಗಿ ಸಾಮರಸ್ಯವನ್ನು ಪೋಷಿಸುವ ಮತ್ತು ಸಾಮೂಹಿಕ ಬೆಳವಣಿಗೆಯ ಮನೋಭಾವವನ್ನು ಬೆಳೆಸುವ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸಿತು. ಅನ್ವಾರುಲ್ ಹುದಾ ವಿವಿದ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಇದನ್ನು ಸ್ಮರಣೀಯ ದಿನವನ್ನಾಗಿ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.