(www.vknews.in) ; ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ರಿ ಮಂಚಿ ಕೊಳ್ನಾಡು ಇವರು ತಮ್ಮ ಕಚೇರಿ ಎದುರು ಹಮ್ಮಿಕೊಂಡ ಭಾರತದ 78ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀಯುತ ಮರಿ ಭಟ್ ಅವರು ಭಾರತದ ಸ್ವಾತಂತ್ರ್ಯ ನಾವು ಪಡೆದು ಕೊಂಡ ರೀತಿಯನ್ನು ಹಿರಿಯರ ತ್ಯಾಗ ಬಲಿದಾನ ಮತ್ತು ಅಂದಿನ ಅವಸ್ಥೆಯನ್ನು ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಿದರು.
ತಾಳ್ಮೆ, ಸಹನೆ, ಐಕ್ಯತೆಗೆ ಸಾಮರಸ್ಯ ಜೀವನ ನಡೆಸಲು ಈ ಸಂದರ್ಭದಲ್ಲಿ ಅವರು ಕರೆ ನೀಡಿದರು, ತನ್ನ ಹಳೆಯ ಸಹಪಾಠಿ ಒಬ್ಬರ ಮಗ ಕೆಲವು ವರ್ಷಗಳ ಹಿಂದೆ ವಿದೇಶದಿಂದ ಹಿಂತಿರುಗಿದಾಗ ಮರಿ ಭಟ್ ಅವರು ವಿದೇಶದ ಬಗ್ಗೆ ಮಾಹಿತಿ ಹಂಚಿ ಕೊಂಡಾಗ ಆತ ಹೇಳಿದ. Go East,Go West our India is best ಎನ್ನುವ ಆ ಒಂದು ಮಾತನ್ನು ನೆನಪಿಸಿ ಕೊಂಡರು.
ನೆರೆದ ವಿದ್ಯಾರ್ಥಿ, ವಿದ್ಯಾರ್ಥಿನಿ ಯರಿಗೆ ಭಾರತದ ತ್ರಿವರ್ಣ ಧ್ವಜದ ಬಣ್ಣದ ಅರ್ಥ ಮತ್ತು ತಾನು ಈ ಹಿಂದೆ ಭೇಟಿ ನೀಡಿದ ಕಾಶ್ಮೀರ ಪ್ರವಾಸ ಅಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಭಾರತದ ವಿವಿಧತೆಯಲ್ಲಿ ಏಕತೆ ಈ ಎಲ್ಲ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ತನ್ನ ಅನುಭವದ ಪ್ರಕಾರ ಮಂಚಿ ಪರಿಸರದಲ್ಲಿ ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಸಂಘಟನೆಯಲ್ಲಿ ಎಲ್ಲಾ ವಿಭಾಗದ ಜನ ಜೊತೆಗೆ ಇದ್ದು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ನೆನಪಿಸಿದರು. ಇವರ ಮಾತುಗಳನ್ನು ನೆರೆದ ಜನ ಬಹಳ ಆಸಕ್ತಿಯಿಂದ ಕೇಳಿಸಿಕೊಳ್ಳುವುದು ಕಾಣಲು ಸಾಧ್ಯವಾಯಿತು .
ಪ್ರಗತಿಪರ ಕೃಷಿಕರು ಸಮಾಜ ಸೇವಕರೂ ಆದ ಇವರನ್ನು ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜೊತೆಗೆ ಮೆಸ್ಕಾಂ ಪರ ಅಬ್ದುಲ್ ಖಾದರ್, ವೈದ್ಯಕೀಯದಲ್ಲಿ ಇತ್ತೀಚೆಗೆ ಪದವಿ ಪಡೆದ ಮಹಮ್ಮದ್ ಆಫ್ನಾನ್ ಅವರುಗಳನ್ನು ಕೂಡಾ ಸ್ಮರಣಿಕೆ ನೀಡಿ ಗೌರವಿಸಲಾಯಿತು, ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ರಿ ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
— ಇಕ್ಬಾಲ್ ಮಂಚಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.