ದೇರಳಕಟ್ಟೆ (www.vknews. in) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಮಂಜನಾಡಿ ಬ್ಲಾಕ್ ಸಮಿತಿಯ ಪ್ರತಿನಿಧಿಗಳ ಸಭೆ ಮತ್ತು 2024 – 2027 ರ ಅವಧಿಯ ಆಂತರಿಕ ಚುಣಾವನೆಯು ದಿನಾಂಕ 16/08/2024 ಶುಕ್ರವಾರ ದೇರಳಕಟ್ಟೆ ಪಕ್ಷದ ಕ್ಷೇತ್ರ ಸಮಿತಿಯ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರಾದ ನೌಷಾದ್ ಕಲ್ಕಟ್ಟ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯದರ್ಶಿ ಇಮ್ತಿಯಾಝ್ ಕಿನ್ಯ ರವರು ಸರ್ವರಿಗೂ ಸ್ವಾಗತಕೋರಿ,ಬ್ಲಾಕ್ ಸಮಿತಿಯ ಪೂರ್ಣಾವಧಿಯ ವರದಿಯನ್ನು ಮಂಡಿಸಿದರು.ಚುಣಾವನಾ ಮೇಲುಸ್ತುವಾರಿ (R O) ಆಗಿ ಆಗಮಿಸಿದ SDPI ಮಂಗಳೂರು ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಮಂಚಿ ರವರು ನಾಯಕತ್ವ,ಜವಾಬ್ದಾರಿ ಹಾಗೂ ಅದರ ನಿರ್ವಹಣೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು._ಸಹ ಚುನಾವಣಾ ಅಧಿಕಾರಿಗಳಾಗಿ ಕಮರ್ ಮಲಾರ್ ಹಾಗೂ ಆಸೀಫ್ ಬದ್ರಿಯ ನಗರ ರವರು ಉಪಸ್ಥಿತರಿದ್ದರು.
ಮಂಜನಾಡಿ, ಕಿನ್ಯ, ತಲಪಾಡಿ, ನರಿಂಗಾನ, ಕೈರಂಗಳ, ಬಾಳೆಪುಣಿ,ಇರಾ” ಗ್ರಾಮ ಸಮಿತಿಯ ಮುಖ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ಮಂಜನಾಡಿ ಬ್ಲಾಕ್ ಸಮಿತಿಯ ಚುಣಾವನೆ ನಡೆಯಿತು. ಮಂಜನಾಡಿ ಬ್ಲಾಕ್ ಸಮಿತಿಯ ನೂತನ ಅಧ್ಯಕ್ಷರಾಗಿ ನೌಷಾದ್ ಕಿನ್ಯ, ಉಪಾಧ್ಯಕ್ಷರಾಗಿ ಹಕೀಂ ಕೆ.ಸಿ.ರೋಡ್, ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕಿನ್ಯ, ಜೊತೆ ಕಾರ್ಯದರ್ಶಿಯಾಗಿ ನಾಸೀರ್ ನರಿಂಗಾನ, ಕೋಶಾಧಿಕಾರಿಯಾಗಿ ಸಯ್ಯದ್ ತ್ವಾಹಾ ತಂಗಳ್ ಕಿನ್ಯ ರವರು ಆಯ್ಕೆಯಾದರು,
ನೂತನ ಸಮಿತಿಯ ಸದಸ್ಯರುಗಳಾಗಿ ರಹ್ಮಾನ್ ಆರೀಫ್ ಕಿನ್ಯ,ಫಾರೂಕ್ ಝಲ್ ಝಲ್ , ಖಾದರ್ ಮೂಳೂರು , ಮುಖ್ತಾರ್ ಕಿನ್ಯ, ರವರು ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನೌಷಾದ್ ಕಲ್ಕಟ್ಟ ರವರು ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು ಕಾರ್ಯದರ್ಶಿ ಇಂತಿಯಾಝ್ ಕಿನ್ಯ ರವರು ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.