(www.vknews. in) ; 78ನೇ ಸ್ವಾತಂತ್ರ್ಯದಿನಾಚರಣೆಯನ್ನು ದ.ಕ ಜಿ ಪ ಹಿ ಪ್ರಾ ಶಾಲೆ ಅಡೆಕಲ್ ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ಪ್ರಥಮ ಪ್ರಜೆಯಾದ ಶ್ರೀಯುತ ಸದಾನಂದ ಶೆಟ್ಟಿ ಇವರು ಯಸ್ ಡಿ ಯಮ್ ಸಿ ಅಧ್ಯಕ್ಷರಾದ ರಮಾನಂದ ಪೆರಾಬೆ ಪ್ರಭಾರ ಮುಖ್ಯ ಉಪಾಧ್ಯಾಯಿನಿ ಶ್ರೀಮತಿ ಪರಿಣಿತಾಕ್ಷಿ ಸಮ್ಮುಖದಲ್ಲಿ ನೆರವೇರಿಸಿದರು,
ಈ ಸಂದರ್ಭದಲ್ಲಿ ಯಸ್ .ಡಿ.ಯಮ್.ಸಿ ಸರ್ವ ಸದಸ್ಯರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹಸೈನಾರ್ ಪಿ ಪ್ರಧಾನ ಕಾರ್ಯದರ್ಶಿ ಹೈದರ್ ಅಡೆಕ್ಕಲ್ ಕಾರ್ಯದರ್ಶಿ ಅಶೋಕ್ ಆನಡ್ಕ ಕೋಶಾಧಿಕಾರಿ ಸಿರಾಜ್ ಪಿ ಹಾಗು ಪದಾಧಿಕಾರಿಗಳು, ಮಸ್ಜಿದುಲ್ ಬದ್ರಿಯಾ ಅಡೆಕಲ್ ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ,ಊರ ಪರಊರ ಶಾಲಾಭಿಮಾನಿಗಳು, ಶಿಕ್ಷಣ ಪ್ರೇಮಿಗಳು ಊರಿನ ಹಿರಿಯರು ಮತ್ತು ಕಿರಿಯರು ಶಾಲಾ ಶಿಕ್ಷಕ ವರ್ಗ ಮತ್ತು ಅಡುಗೆ ಸಿಬ್ಬಂದಿಗಳು ಪುಟಾಣಿ ಮಕ್ಕಳು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದರು.
ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಅತಿಥಿಗಳಾಗಿ ಆಗಮಿಸಿದ ಮಸ್ಜಿದುಲ್ ಬದ್ರಿಯಾ ಅಡೆಕಲ್ ನ ಮುಖ್ಯ ಗುರುಗಳಾದ ಶ್ರೀಯುತ ಯಹ್ಯಾ ಫೈಝಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿ ಹೇಳಿದರು.ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ರಮಾನಂದ ಕೆ ಶುಭ ಹಾರೈಸಿದರು. ಹಿರೇಬಂಡಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಸದಾನಂದ ಶೆಟ್ಟಿ ಅವರು ಅಧ್ಯಕ್ಷೀಯ ನುಡಿಗಳನ್ನುಆಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.