ಹಳೆಯಂಗಡಿ (www.vknews.in) ; 78’ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಲ್ಲಿನ ಬೊಳ್ಳೂರು ರಿಲಾಯನ್ಸ್ ಅಸೋಸಿಯೇಷನ್ (ರಿ) ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಸಂಸ್ಥೆಯ ಮುಖ್ಯ ಕಚೇರಿ ರಿಲಯನ್ಸ್ ಭವನದದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯ ಸದರ್ ಮುಅಲ್ಲಿಮ್ ನಾಸಿರ್ ಮುಸ್ಲಿಯಾರ್ ಅವರ ಉಪಸ್ಥಿತಿಯಲ್ಲಿ ಕಾರ್ಯದರ್ಶಿ ಇಕ್ಬಲ್ ಎಂ.ಎ ಅವರು ಧ್ವಜಾರೋಹಣವನ್ನು ನೆರವೇರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಕಲಂದರ್ ಕೌಶಿಕ್ ಅವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ಹಿಂದಿನ ಹೋರಾಟದಲ್ಲಿ ತ್ಯಾಗ ಮತ್ತು ಬಲಿದಾನ ನೀಡಿದ ಭಾರತೀಯ ವೀರರಿಗೆ ಗೌರವ ಅರ್ಪಣೆಯನ್ನು ನೀಡಿದರು.
ಸಭಾ ಕಾರ್ಯಕ್ರಮದ ಬಳಿಕ ರಿಲಯನ್ಸ್ ಭವನದ ಮುಂಭಾಗದಲ್ಲಿ ಸಾರ್ವಜನಿಕವಾಗಿ ವಿವಿಧ ರೀತಿಯ ಆಟೊಟ ಸ್ಪರ್ಧೆ ನೆರವೇರಿತು. ಕಾರ್ಯಕ್ರಮದ ಕೊನೆಯಲ್ಲಿ ರಿಲಯನ್ಸ್ ನ ಸಂಸ್ಥೆಯ ಸಲಹೆಗಾರ ಆರಿಶ್ ನವರಂಗ್ ಮತ್ತು ಜೊತೆ ಕಾರ್ಯದರ್ಶಿ ಅಬ್ದುಲ್ ಮುಬಾರಕ್ ಅವರು, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನೆರವೇರಿಸಿದರು
ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಝೀಝ್ ಐ.ಎ.ಕೆ, ಮುಹಿಯುದ್ದೀನ್ ಜುಮಾ ಮಸೀದಿಯ ಜೊತೆ ಕಾರ್ಯದರ್ಶಿ ಅಬ್ದುಲ್ ಹಮೀದ್, ಕಿಲಿರಿಯ ಮದರಸ ಇಂದಿರಾನಗರದ ಅಧ್ಯಾಪಕ ಶಮ್ಮಾಸ್ ಬದಿಯಡ್ಕ, SDPI ಮುಲ್ಕಿ ಬ್ಲಾಕ್ ಕಾರ್ಯದರ್ಶಿ ಶಂಶೀರ್ ಎಂ.ಎಂ, ರಿಲಯನ್ಸ್ ನ ಲೆಕ್ಕ ಪರಿಶೋಧಕ ಅಕ್ಬರ್ ಬೊಳ್ಳೂರು, ರಿಲಯನ್ಸ್ ಎನ್.ಆರ್.ಐ ಘಟಕದ ಗೌಸ್ ಸೌದಿ ಅರೇಬಿಯಾ ಮತ್ತು ರಿಲಯನ್ಸ್ ನ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗು ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಅದ್ದಿ ಬೊಳ್ಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.