(www.vknews. in) ; ಮೈಸೂರಿನಲ್ಲಿ ನಡೆದ ಬಾಲಕರ ಕರ್ನಾಟಕ ರಾಜ್ಯ ವೈಟ್ಲಿಪ್ಟಿಂಗ್ ಚಾಂಪಿಯನ್ಷಿಪ್ 2024-25ರಲ್ಲಿ ರೈಫಾನ್ ಅಹಮದ್ 3ನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವೈಟ್ಲಿಫ್ಟರ್ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ವೈಟ್ಲಿಫ್ಟರ್ ಸಂಸ್ಥೆ, ದೈಹಿಕ ಶಿಕ್ಷಕರ ಅಕಾಡೆಮಿ ವತಿಯಿಂದ ಮೈಸೂರಿನ ಮಹಾಜನ ಡಿಗ್ರಿ ಕಾಲೇಜು ಕ್ರೀಡಾಂಗಣದಲ್ಲಿ ಆಗಸ್ಟ್ 17-18ರಂದು ನಡೆದ ರಾಜ್ಯಮಟ್ಟದ ಚಾಂಪಿಯನ್ಷಿಪ್ನಲ್ಲಿ ಜೂನಿಯರ್ 61 ಕೆ.ಜಿ. ವಿಭಾಗದಲ್ಲಿ ರೈಫಾನ್ ಅಹಮದ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ.
ಮಂಗಳೂರು ಎಸ್.ಡಿ.ಎಂ. ಕಾಲೇಜಿನಲ್ಲಿ ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿಯಾಗಿರುವ ರೈಫಾನ್ ಅಹಮದ್, ಬಿ.ಸಿ. ರೋಡ್ ಶಾಂತಿಅಂಗಡಿ ನಿವಾಸಿ ರಫೀಕ್ ಮತ್ತು ಝೊಹರಾ ದಂಪತಿಗಳ ಪುತ್ರ . ಮಂಗಳೂರಿನ ಮಂಗಳಾ ಥ್ರೋವರ್ಸ್ ಅಕಾಡೆಮಿಯಲ್ಲಿ ಪುಷ್ಪರಾಜ್ ಹೆಗ್ಡೆ ಮತ್ತು ಸುದರ್ಶನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.