(www.vknews. in) ; 2023-24 ನೇ ಸಾಲಿನ ತಾಜುಲ್ ಫುಖಹಾ ಅವಾರ್ಡ್ ಗೆ ಅರ್ಹರಾದ ವಿದ್ಯಾರ್ಥಿಗಳ ಹೆಸರು ಪ್ರಕಟಿಸಲಾಗಿದೆ. ತಾಜುಲ್ ಫುಖಹಾ ಬೇಕಲುಸ್ತಾದರ ಸುದೀರ್ಘಕಾಲದ ಕರ್ಮಭೂಮಿಯಾಗಿದ್ದ ಬೇಕಲ್ ರೇಂಜ್ ಮಟ್ಟದ ಮದ್ರಸಗಳ ಪಬ್ಲಿಕ್ ಪರೀಕ್ಷೆ ಗಳಲ್ಲಿ ಮತ್ತು ಬೇಕಲ್ ಉಸ್ತಾದರು ಅಂತ್ಯವಿಶ್ರಮ ಪಡೆಯುತ್ತಿರುವ ಮರಿಕ್ಕಳ ವ್ಯಾಪ್ತಿಯ ಮೊಂಟೆಪದವು ರೇಂಜ್ ಮಟ್ಟದ ಮದ್ರಸ ಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ತಾಜುಲ್ ಫುಖಹಾ ಅವಾರ್ಡ್ ನೀಡಲಾಗುತ್ತದೆ.
ಮರಿಕ್ಕಳ ಜಮಾಅತ್ ವತಿಯಿಂದ ಆಗಷ್ಟ್ 22,23,24 ದಿನಗಳಲ್ಲಿ ತಾಜುಲ್ ಫುಖಹಾ 4ನೇ ಆಂಡ್ ಅನುಸ್ಮರಣೆ ನಡೆಯಲಿದೆ.ಮತ ಪ್ರಭಾಷಣ ,ಆಧ್ಯಾತ್ಮಿಕ ಮಜ್ಲಿಸ್, ಉಲಮಾ ಸಂಗಮ, ಅನುಸ್ಮರಣೆ ಸಮಾರೋಪ.ಅನ್ನದಾನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಲವಾರು ಸಾದಾತುಗಳು, ಉಲಮಾ ನೇತಾರರು,ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಆಗಷ್ಟ್ 24 ನೇ ಶನಿವಾರ ಬೆಳಿಗ್ಗೆ 10:30ಕ್ಕೆ ನಡೆಯಲಿರುವ ಉಲಮಾ ಸಂಗಮದಲ್ಲಿ ಶೈಖುನಾ ಚೆರುಶೋಲ ಅಬ್ದುಲ್ ಜಲೀಲ್ ಸಖಾಫಿ,, “ವಿದ್ವಾಂಸರು ಗಮನಿಸಬೇಕಾದ ವಿಷಯಗಳು” ಎಂಬ ವಿಚಾರ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಸ್ತುತ ಉಲಮಾ ಸಂಗಮದ ಸಮಾರೋಪದಲ್ಲಿ ತಾಜುಲ್ ಫುಖಹಾ ಅವಾರ್ಡ್ ಪ್ರದಾನ ಮಾಡಲಾಗುವುದು.2023-24ನೇ ಸಾಲಿನ ತಾಜುಲ್ ಫುಖಹಾ ಅವಾರ್ಡ್ ಗೆ ಅರ್ಹರಾದ ವಿದ್ಯಾರ್ಥಿಗಳು; ಮುಜ್ತಬಾ- ಅಬೂಬಕರ್ ಮವ್ವಳ್, ಬೇಕಲ, ಫಿದಾ ಫಾತಿಮಾ- ರಫೀಖ್ ಚೆರುಂಬ, ಬೇಕಲ್ ಸನಾ ಪಿ.ಎಂ – ಶಾಫೀ ಪಿ ಎಮ್ ಮವ್ವಳ್, ಬೇಕಲ್. ಸಫಿಯ್ಯ ಕೆ-ಇಸ್ಮಾಯಿಲ್ ಹದ್ದಾದ್ ನಗರ ಬೇಕಲ್. ಅಮಲುನ್ನುಸೈಬಾ-ಅಬೂಸ್ವಾಲಿಹ್ ಮರಿಕ್ಕಳ, ಮೊಂಟೆಪದವು ನುಝ್ಹಾ, ಫಾತಿಮಾ- ಮೊಯಿದಿನ್ ಕುಂಞಿ ಮೊಂಟೆಪದವು ಅಬ್ದುಲ್ ಹಫೀಝ್- ಇಬ್ರಾಹಿಮ್ ಮರಿಕ್ಕಳ, ಮೊಂಟೆಪದವು. ರವರು ಆಯ್ಕೆ ಯಾದವರು.
ತಾಜುಲ್ ಫುಖಹಾ ಅವಾರ್ಡ್ ನಗದು ಹಾಗೂ ಅವಾರ್ಡ್ ಸ್ಮರಣಿಕೆ ಯನ್ನು ಹೊಂದಿದೆ. ತಾಜುಲ್ ಫುಖಹಾ ಪಿ.ಎಮ್ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ನ.ಮ.ರವರ ಶಿಷ್ಯಂದಿರ ಸಂಘಟನೆ ಮಜ್ಲಿಸು ಇಶಾಅತಿಸ್ಸುನ್ನ ಬೇಕಲ್ ಈ ಪುರಸ್ಕಾರವನ್ನು ಪ್ರತೀ ವರ್ಷವೂ ಅನುಸ್ಮರಣಾ ದಿನದಂದು ನೀಡುತ್ತದೆ ಎಂದು ಡಿ.ಎ.ಅಬ್ಬಾಸ್ ರಝ್ವಿ ಪಡಿಕ್ಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.