ಬಂಟ್ವಾಳ (www.vknews.in) : ಅಪರಿಚಿತ ಮಹಿಳೆಯ ಶವವೊಂದು ನೇತ್ರಾವತಿ ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ಶಂಭೂರು ಗ್ರಾಮದ ಎ.ಎಮ್.ಆರ್. ಪವರ್ ಲಿಮಿಟೆಡ್ ಡ್ಯಾಂ ನ 6 ನೇ ಗೇಟ್ ನ ಬಳಿ ಸುಮಾರು 40 ರಿಂದ 55 ವರ್ಷದ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದ್ದು, ಸುಮಾರು 15 ದಿನಗಳ ಹಿಂದೆ ಮಹಿಳೆ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಎ.ಎಮ್.ಆರ್ ಡ್ಯಾಂ ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಶೆಟ್ಟಿ ಎಂಬವರು ಮೃತದೇಹವನ್ನು ನೋಡಿ ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಎಸ್. ಐ.ಹರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.