(www.vknews.in) ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೋಟೆಕಾರ್ ಪಟ್ಟಣ ಸಮಿತಿಯ ಆಂತರಿಕ ಚುನಾವಣೆ ದಿನಾಂಕ 20/08/2024 ರಂದು ತಲಪಾಡಿ ಪಕ್ಷದ ಕಛೇರಿಯಲ್ಲಿ ನಡೆಯಿತು. ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ಉಬೈದ್ ಅಮ್ಮೆಂಬಳ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
2024-27 ರ ಅವಧಿಗೆ ಕೋಟೆಕಾರ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಮೊಯಿದಿನ್ ಎಸ್ ಬಿ ಕಾರ್ಯದರ್ಶಿಯಾಗಿ ರೆಹಮಾನ್ ಮಾಡೂರು ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜಾಫರ್ ಅಜ್ಜಿನಡ್ಕ ಜೊತೆ ಕಾರ್ಯದರ್ಶಿಯಾಗಿ ಆಸೀಫ್ ಮುಲ್ಲುಗುಡ್ಡೆ ಕೋಶಧಿಕಾರಿ ಫಿರೋಜ್ ಅಬ್ಬಾಸ್ ಹಾಗೂ ಸಮಿತಿ ಸದಸ್ಯರಾಗಿ ಹನೀಫ್ ಕೋಟೆಕಾರ್ ಶಾಕಿರ್ ಪನೀರ್ ಇವರನ್ನು ಆರಿಸಲಾಯಿತು.
ನೂತನ ಅಧ್ಯಕ್ಷರಾದ ಮೊಯಿದಿನ್ ಎಸ್ ಬಿ ಸಭೆ ಉದ್ದೇಶಿಸಿ ಮಾತನಾಡಿದರು. ಮಂಗಳೂರು ವಿಧಾನ ಸಭಾ ಕ್ಷೆತ್ರ ಸಂಘಟನಾ ಕಾರ್ಯದರ್ಶಿ ಅಶ್ರಫ್ ಮಂಚಿ ನಾಯಕತ್ವದ ತರಬೇತಿಯನ್ನು ನೀಡಿ, ನೂತನ ಜೊತೆ ಕಾರ್ಯದರ್ಶಿಯಾದ ಆಸೀಫ್ ಮುಲ್ಲುಗುಡ್ಡೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.