(www.vknews.in) ; ಬೆಳ್ವೆ ಸಹಾಯಧನ ಹಸ್ತಾಂತರ ಟೀಮ್ ಮಲೆನಾಡು ಹ್ಯೂಮ್ಯಾನಿಟೇರಿಯನ್ ಟ್ರಸ್ಟ್ (ರಿ) ಬೆಳ್ವೆ ಇದರ ವತಿಯಿಂದ ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಯಲ್ಲಿ ಬಳಲುತ್ತಿದ್ದಂತಹ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ಇಬ್ಬರು ಮಹಿಳೆಯರ ಶಸ್ತ್ರ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಇತ್ತೀಚೆಗೆ ಹಿದಾಯತುಲ್ ಉಲೂಮ್ ಅರಬಿ ಮದ್ರಸ ಕಛೇರಿ ಬೆಳ್ವೆ ಕುಂದಾಪುರ ತಾಲೂಕು ಇಲ್ಲಿ ನಡೆದ “ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ” ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ಬೆಳ್ವೆ ಮಸೀದಿ ಅಧ್ಯಕ್ಷರಾದ ಅಹ್ಮದ್ ಬ್ಯಾರಿ, ಬೆಳ್ವೆ ಮದ್ರಸ ಉಪಾಧ್ಯಕ್ಷರಾದ ಅಬ್ದುಲ್ ಬ್ಯಾರಿ, ಸ್ಥಳೀಯರಾದ ಷರೀಫ್ ಸಾಹೇಬ್ ಹಾಗೂ ಅಬ್ದುಲ್ ಖಾದರ್ ಸಾಹೇಬ್ ಉಪಸ್ಥಿತರಿದ್ದರು. ಟ್ರಸ್ಟೀಗಳಾದ ಮೊಹಮ್ಮದ್ ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.