ಫರಂಗಿಪೇಟೆ (www.vknews.in) ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಫರಂಗಿಪೇಟೆ ಬ್ಲಾಕ್ ಸಮಿತಿಯ ಪ್ರತಿನಿಧಿಗಳ ಸಭೆ ಮತ್ತು 2024 – 2027 ರ ಅವಧಿಯ ಆಂತರಿಕ ಚುಣಾವನೆಯು ದಿನಾಂಕ 20/08/2024 ಮಂಗಳವಾರ ತುಂಬೆ ಯಲ್ಲಿ SDPI ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಬಶೀರ್ ಎಸ್.ಎಂ. ರವರ ಅಧ್ಯಕ್ಷತೆಯಲ್ಲಿ ಜರುಗಿತು
ಚುಣಾವಣಾಧಿಕಾರಿಯಾಗಿ ಆಗಮಿಸಿದ SDPI ದೇರಳಕಟ್ಟೆ ಬ್ಲಾಕ್ ಸಮಿತಿಯ ಕಾರ್ಯದರ್ಶಿ ಝೈನುದ್ದೀನ್ ಹರೇಕಳ ರವರು ನಾಯಕತ್ವ,ಜವಾಬ್ದಾರಿ ಹಾಗೂ ಅದರ ನಿರ್ವಹಣೆಯ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಸಹ ಚುನಾವಣಾ ಅಧಿಕಾರಿಗಳಾಗಿ ಸುಫೈದ್ ಮಲಾರ್ ರವರು ಉಪಸ್ಥಿತರಿದ್ದರು.
ಫರಂಗಿಪೇಟೆ ಬ್ಲಾಕ್ ವ್ಯಾಪ್ತಿಯ ಗ್ರಾಮ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಫರಂಗಿಪೇಟೆ ಬ್ಲಾಕ್ ಸಮಿತಿಯ ಚುಣಾವನೆ ನಡೆಯಿತು. ಫರಂಗಿಪೇಟೆ ಬ್ಲಾಕ್ ಸಮಿತಿಯ ನೂತನ ಅಧ್ಯಕ್ಷರಾಗಿ ಇರ್ಫಾನ್ ತುಂಬೆ, ಕಾರ್ಯದರ್ಶಿಯಾಗಿ ಶಾಫಿ ಅಮ್ಮೆಮ್ಮಾರ್ ಕೋಶಾಧಿಕಾರಿಯಾಗಿ ಅಲ್ತಾಫ್ ತುಂಬೆ ರವರು ಆಯ್ಕೆಯಾದರು.
ನೂತನ ಸಮಿತಿಯ ಸದಸ್ಯರುಗಳಾಗಿ ಪುದು ಗ್ರಾಮ ಪಂಚಾಯತ್ ಸದಸ್ಯರಾದ ನಝೀರ್ ಪುದು ಹಾಗೂ ಇಸ್ಮಾಯಿಲ್ ತುಂಬೆ ರವರು ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಇರ್ಫಾನ್ ತುಂಬೆ ರವರು ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು ನೂತನ ಕಾರ್ಯದರ್ಶಿ ಪುದು ಗ್ರಾಮ ಪಂಚಾಯತ್ ಸದಸ್ಯರಾದ ಶಾಫಿ ಅಮ್ಮೆಮ್ಮಾರ್ ರವರು ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.