ಅಜ್ಮಾನ್ (www.vknews.in) ; ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಜ್ಮಾನ್ ಝೋನ್ ವತಿಯಿಂದ ಸೆಪ್ಟೆಂಬರ್ 8 ರಂದು ನಡೆಯುವ ಬ್ರಹತ್ ಮೀಲಾದ್ ಸಮಾವೇಶ ಕಾರ್ಯಕ್ರಮದ ಸ್ವಾಗತ ಸಮಿತಿ ಸಬೆಯು KCF ಅಜ್ಮಾನ್ ಉಮರಾ ನಾಯಕ ಹಸನ್ ಕಂಬಳಬೆಟ್ಟು ರವರ ಕಛೇರಿಯಲ್ಲಿ ಝೋನ್ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಅಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಝೋನ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕೊಡಿಪ್ಪಾಡಿ ಸ್ವಾಗತ ಕೋರಿದರು. ಕೆಸಿಎಫ್ ರಾಷ್ಟ್ರೀಯ ಇಹ್ಸಾನ್ ಅಧ್ಯಕ್ಷ ಅಬ್ದುಲ್ ಖಾದರ್ ಸಅದಿ ಸಭೆಯನ್ನು ಉದ್ಘಾಟಿಸಿದರು..
ಅಧ್ಯಕ್ಷರ ಭಾಷಣಗೈದ ಅಮಾನಿ ಉಸ್ತಾದರು “ಕರುಣೆಯ ಪ್ರವಾದಿ (ಸ ಅ) ರು ಒಂದು ಸುಂದರವಾದ ಕುಲೀನವಾದ ಕುಟುಂಬದಲ್ಲಿ ಜನಿಸಿದ ಗಂಡು ಮಗು ಆಗಿದ್ದರಿಂದ ಹೆಮ್ಮೆ ಪಡುತ್ತಾ ನಂತರದ ದಿನಗಳಲ್ಲಿ ಪ್ರವಾದಿ (ಸ ಅ) ರನ್ನು ದ್ವೇಷಿಸುತ್ತಾ ಕೊನೇ ಕ್ಷಣದಲ್ಲಿ ಅವರಲ್ಲಿ ಬಹುತೇಕ ಮಂದಿ ಪವಿತ್ರ ಇಸ್ಲಾಮ್ ಧರ್ಮ ಸ್ವೀಕರಿಸಲು ನೆಬಿಯವರ ಮೇಲ್ಮೆ ಗುಣ ಕಾರಣವಾಯಿತು ಎಂದು ವಿವರಿಸಿದರು ..”
ಮುತ್ತು ನಬಿ (ಸ ಅ) ಮಾನವೀಯತೆಯ ಮಾರ್ಗದರ್ಶಿ- ರಬೀಹ್ 24″ ಎಂಬ ಕ್ಯಾಂಪೇನ್ ಅನ್ನು ಝೋನ್ ಮಟ್ಟದಲ್ಲಿ ಅಬೂಬಕ್ಕರ್ ಸಿದ್ದೀಕ್ ಅಮಾನಿ ಉಸ್ತಾದ್ ಚಾಲನೆ ನೀಡಿದರು.ನಂತರ ಈ ಕೆಳಗಿನ ಸ್ವಾಗತ ಸಮಿತಿ ರಚಿಸಲಾಯಿತು
ಗೌರವಾಧ್ಯಕ್ಷ . ಸಯ್ಯಿದ್ ತ್ವಾಹಿರ್ ತಂಗಲ್. ಛೇರ್ಮನ್: ಹಸನ್ ಕಂಬಳಬೆಟ್ಟು. ವರ್ಕಿಂಗ್ ಚೇರ್ಮನ್ ಶಾಫಿ ಸಖಾಫಿ. ಉಪಾಧ್ಯಕ್ಷರಾಗಿ ಹಾರಿಸ್ ನಾಡ್ಜೆ, ಅನ್ವರ್ ಉಳ್ಳಾಲ್, ಜನರಲ್ ಕನ್ವೀನರ್ ಸಿದ್ದೀಕ್ ಪಾಣೆಮಂಗಳೂರು . ಜಾಯಿಂಟ್ ಕನ್ವೀನರ್ ಹಕೀಮ್ ಕುಂಜಾಡಿ ಖಜಾಂಜಿ ,ರಿಜ್ವಾನ್ ಜೆಪ್ಪು ಆಯ್ಕೆಯಾದರು ಹಾಗೂ ಕಾರ್ಯಕ್ರಮದ ವಿವಿಧ ವಿಭಾಗಗಳಿಗೆ ಉಸ್ತುವಾರಿಗಳನ್ನು ಆರಿಸಲಾಯಿತು. ಸಿದ್ದೀಕ್ ಪಾಣೆಮಂಗಳೂರು ಧನ್ಯವಾದ ಹೆಳಿ ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಯಗೊಂಡಿತು.
ವರದಿ : ಮನ್ಸೂರ್ ಬೆಳ್ಳಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.