ಮಾಣಿ (www.vknews.in) ; ಸುಲ್ತಾನುಲ್ ಉಲಮಾ ಶೈಖುನಾ ಎಪಿ ಉಸ್ತಾದ್ ಇಜಾಝತ್ ನೀಡಿ ಅನುಷ್ಠಾನಗೊಳಿಸಲು ಕಾರ್ಯಕರ್ತರಿಗೆ ನೀಡಿದ ” ಮಹ್ಳರತುಲ್ ಬದ್ರಿಯಾ ” ಮಜ್ಲಿಸ್ ನಮ್ಮ ಪರಲೋಕ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಲ್ಲರೂ ಈ ಪವಿತ್ರವಾದ ಆಧ್ಯಾತ್ಮಿಕ ಬದರ್ ಮಜ್ಲಿಸ್ ನಲ್ಲಿ ಪಾಲ್ಗೊಂಡು ಯಶಸ್ವಿಯಾಗಿರಿ ಎಂದು ಅಲ್ ಹಾಜ್ ಬದ್ರುದ್ದೀನ್ ಅಹ್ಸನಿ ವಳಾಲ್ ಹೇಳಿದರು.
ಅವರು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್ ಮತ್ತು ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಬಶೀರ್ ಝುಹ್ರಿ ಉಸ್ತಾದರ ಸಜೀಪ ಬೇಂಕೆ ನಿವಾಸದಲ್ಲಿ ನಡೆದ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನಲ್ಲಿ ಮುಖ್ಯ ಭಾಷಣ ಮಾಡಿದರು. ಅಲ್ ಹಾಜ್ ಹಂಝ ಮುಸ್ಲಿಯಾರ್ ವಳಾಲ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ದುಆ ಮಾಡಿದರು.
ಬಹು| ಅಬ್ದುಲ್ ಹಮೀದ್ ಮುಸ್ಲಿಯಾರ್ ನಂದಾವರ,ಮಹ್ಮೂದ್ ಸಅದಿ ತಾಳಿತ್ತನೂಜಿ, ಮನ್ಸೂರ್ ಕಲ್ಲಡ್ಕ,ಯೂಸುಫ್ ಹಾಜಿ ಸೂರಿಕುಮೇರು, ಅಬೂಬಕ್ಕರ್ ಹಾಜಿ ವಳಾಲ್, ಅಬ್ದುಲ್ ಕರೀಂ ಸೂರಿಕುಮೇರು, ಹಂಝ ಸೂರಿಕುಮೇರು, ಅಬ್ದುಲ್ ಖಾದರ್ ಬರಿಮಾರ್ ಮುಂತಾದವರು ಉಪಸ್ಥಿತರಿದ್ದರು. ಸಲೀಂ ಮಾಣಿ ಸ್ವಾಗತಿಸಿ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.