(www.vknews.in) : “ಜೀವ ಉಳಿಸುವ ವೈದ್ಯರನ್ನು ದೇವರಂತೆ ಕಾಣಬೇಕು” .ಆದರೆ ಕೋಲ್ಕತ್ತಾದ ಆರ್.ಜಿ.ಆರ್ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿಯ ಅತ್ಯಾಚಾರ ಮತ್ತು ಕೊಲೆ ಅಮಾನವೀಯ ಕೃತ್ಯವಾಗಿದೆ. ದೇಶದ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪ್ರಶ್ನೆಮೂಡುವಂತಾಗಿದೆ.
“ಹೆಣ್ಣುಮಕ್ಕಳ ಸುರಕ್ಷತೆ ನಮ್ಮ ಹೊಣೆ”, ” ನ್ಯಾಯಕ್ಕಾಗಿ ಹೋರಾಡೋಣ” ಎಂದು ಉಲ್ಲೇಖಿತವಾಗಿರುವ ಪೋಸ್ಟರ್ ಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿನಿಗಳು ವೈದ್ಯೆಯ ಹತ್ಯೆ ಮತ್ತು ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ನಾವೆಲ್ಲರೂ ಒಂದಾಗಿ ಆರೋಪಿಯ ಕಠಿಣ ಶಿಕ್ಷೆಗಾಗಿ ಒತ್ತಾಯಿಸುತ್ತೇವೆ.ನಮ್ಮ ಹೋರಾಟ ನ್ಯಾಯಕ್ಕಾಗಿ ಎಂದು ಹೇಳಿದರು.
ದೇಶದಲ್ಲಿ ಪದೇ ಪದೇ ನಡೆಯುವ ಇಂತಹ ಕೃತ್ಯದಿಂದ ಮಾನಸಿಕ, ಆಂತರಿಕ ಭಾವನೆಗಳಿಗೆ ಧಕ್ಕೆಯಾಗಿದೆ.ಕಾನೂನಾತ್ಮಕವಾಗಿ ಹೊಸ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.