ಕಲ್ಪಟ್ಟ (www.vknews.in) : ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ನವವಿವಾಹಿತೆ ಮೃತಪಟ್ಟಿದ್ದಾರೆ. ವಯನಾಡ್ ಅಂಕುಕುನ್ ಮೂಲದ ಶಹಾನಾ (21) ಶನಿವಾರ ಬೆಳಿಗ್ಗೆ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತಪಟ್ಟವರು ಇದೇ ತಿಂಗಳ 11ರಂದು ವೈತಿರಿ ಮೂಲದ ಅರ್ಷದ್ ಎಂಬವರ ಜತೆ ವಿವಾಹವಾಗಿತ್ತು. ಜ್ವರಕ್ಕೆ ಚಿಕಿತ್ಸೆ ಪಡೆದಾಗ ತಜ್ಞ ಚಿಕಿತ್ಸೆಗಾಗಿ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇವರು ಅಂಕುಕುನ್ ಕೌಂಗತೋಡಿ ಮಮ್ಮುಟ್ಟಿ ಮತ್ತು ಜುಬೈರಿಯಾ ದಂಪತಿಯ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.