(www.vknews.in) ; ಅಲ್ ಫಾರೂಕ್ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಇಸ್ಲಾಂ ಶಾಂತಿನಗರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಆಡಳಿತ ಸಮೀತಿಯ ಅಧ್ಯಕ್ಷರು ನೌಶಾದ್ ಅಲಿ ಉಸ್ಮಾನ್ ನೇತ್ರತ್ವದಲ್ಲಿ ಧ್ವಜಾರೋಹಣ ನೆರೆವೇರಿತು ಬಳಿಕ ಮದ್ರಸಾ ಉಸ್ತುವಾರಿ ಆಜ್ಮಲ್ ಸ್ವಾಗತಿಸರೊಂದಿಗೆ ಸ್ಥಳೀಯ ಖತೀಬರಾದ ಇಬ್ರಾಹಿಂ ಬಾತೀಶ್ ಸಅದಿ ದುಆ ಆಶೀರ್ವಚನ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸ್ಥಳೀಯ ಸದ್ರ್ ಮುಅಲ್ಲಿಂ ಸಿನಾನ್ ಅಲಿ ಹನೀಫಿ ಸಂದೇಶ ಭಾಷಣ ನೀಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ಪ್ರಸ್ತಾಪಿಸಿದರು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮದ್ರಸದಲ್ಲಿ ನಡೆದ ಚಿತ್ರಕಲೆ,ಪ್ರಬಂಧ,ಕ್ವಿಜ್ ಇನ್ನಿತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು ನಂತರ ಸಿಹಿ ತಿಂಡಿ ವಿತರಿಸಿ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಆಡಳಿತ ಸಮೀತಿಯ ಗೌರವ ಅಧ್ಯಕ್ಷರಾದ ಅಯ್ಯೂಬ್ ಹಾಜಿ ಮತ್ತು ಅಧ್ಯಕ್ಷ ನೌಶಾದ್ ಅಲಿ ಕಾರ್ಯದಕ್ಷಿ ಹೈದೆರ್ ಹಾಜಿ ಕೋಶಾಧಿಕಾರಿ ಅನ್ವರ್ ಉಸ್ತುವಾರಿಗಳಾದ ಆಜ್ಮಲ್,ಶೇಖಬ್ಬ ಹಾಗೂ ಬದ್ರಿಯಾ ಯಂಗ್ಮೆನ್ಸ್ ಅಧ್ಯಕ್ಷರಾದ ಇಜಾಜ್ ಗೌರವ ಅಧ್ಯಕ್ಷ ರಶೀದ್ ಹಾಗೂ ಕಾರ್ಯದರ್ಶಿ ಫಯಾಜ್ ಇನ್ನಿತರ ಸದಸ್ಯರು ಹಾಗೂ ಗಲ್ಫ್ ವೆಲ್ಫೇರ್ ಅಸೋಸಿಯೇಷನ್ ಶಾಂತಿನಗರ ಅಧ್ಯಕ್ಷರಾದ ಶೇಖಬ್ಬ ಸೇರಿದಂತೆ ಊರಿನ ಹಿರಿಯ ನಾಗರಿಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.