ಉಳ್ಳಾಲ (www.vknews.in) : ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷರೂ, ಪ್ರಗಲ್ಬ ವಿದ್ವಾಂಸರೂ, ಖಾಝಿಗಳೂ ಆಗಿದ್ದ ಶೈಖುನಾ ಮರ್ಹೂಂ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಅವರ 4ನೇ ಆಂಡ್ ಅನುಸ್ಮರಣೆಯ ಪ್ರಯುಕ್ತ ಮರಿಕ್ಕಳ ಜಮಾಅತ್ ಮತ್ತು ಉಸ್ತಾದರ ಶಿಷ್ಯಂದಿರ ಸಂಘಟನೆ ಬೇಕಲ್ ಮಜ್ಲಿಸ್ ಇಶಾಅತಿಸ್ಸುನ್ನ, ಮೊನ್ನೆ ಆಗಸ್ಟ್ 24 ಶನಿವಾರ ಏರ್ಪಡಿಸಿದ ಬ್ರಹತ್ ಉಲಮಾ ಸಂಗಮವು ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು.
ಪ್ರಗಲ್ಭ ವಿಧ್ವಾಂಸರೂ, ಖ್ಯಾತ ಚಿಂತಕರೂ, ಮರ್ಕಝ್ ಮುದರ್ರಿಸರೂ ಆಗಿರುವ ಚೆರುಶ್ಶೋಲ ಅಬ್ದುಲ್ ಜಲೀಲ್ ಸಖಾಫಿ ಉಸ್ತಾದರು, ಉಲಮಾಗಳ ಭಾದ್ಯತೆ ಮತ್ತು ಉಲಮಾಗಳು ತಿಳಿದಿರಬೇಕಾದ ಹಲವಾರು ಸಂದರ್ಭೋಜಿತ ವಿಷಯಗಳ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಕ್ಲಾಸ್ ನಡೆಸಿದರು. ಇಶಾಅತ್ ಅಧ್ಯಕ್ಷರಾದ ವಿ.ಎ. ಮುಹಮ್ಮದ್ ಸಖಾಫಿ ವಲವೂರ್ ಅವರ ಅಧ್ಯಕ್ಷ ಭಾಷಣದಲ್ಲಿ, ಶೈಖುನಾ ಬೇಕಲ್ ಉಸ್ತಾದ್ ಮತ್ತು ಶೈಖುನಾ N.M. ಉಸ್ತಾದರ ಬಾಂಧವ್ಯದ ಬಗ್ಗೆ ವಿವರಿಸಿದರು.
ಇಶಾಅತ್ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿದರು. ಭಾಗವಹಿಸಿದ ಎಲ್ಲಾ ಉಲಮಾಗಳು ಕುಳಿತಲ್ಲಿಂದ ಕದಲದೆ ಕ್ಲಾಸ್ ಕೇಳಿ ಮಂತ್ರ ಮುಗ್ದರಾಗಿದ್ದರು, ವಿದ್ಯಾದಾಹಿಗಳಾದ ಮುತಅಲ್ಲಿಮರು, ಉಸ್ತಾದರುಗಳು ತರಗತಿಗಳ ಪಾಯಿಂಟ್ ಗಳನ್ನು ನೋಟ್ ಮಾಡಿಕೊಳ್ಳುತ್ತಿರುವುದು ಕಂಡುಬಂತು.
ಸಂಗಮದಲ್ಲಿ, ಹಲವಾರು ವರ್ಷಗಳ ಕಾಲ ದರ್ಸ್ ನಡೆಸಿ ಹಲವಾರು ಉಲಮಾಗಳನ್ನು ಸಮುದಾಯಕ್ಕರ್ಪಿಸಿದ ಮೂಳೂರು ಅಬ್ದುರ್ರಹ್ಮಾನ್ ಮದನಿ, ಸಯ್ಯಿದ್ ಆದೂರ್ ತಂಙಳ್,ಬೊಳ್ಮಾರ್ ಉಸ್ತಾದ್, ಬೇಕಲ್ ಖತೀಬ್ ಶಾಫಿ ಬಾಖವಿ ಚಾಲಿಯಂ, ಹಾಗೂ ಸಯ್ಯಿದ್ ಚಟ್ಟೆಕಲ್ ತಂಘಳ್, ಸಯ್ಯಿದ್ ಶರಫುದ್ದೀನ್ ತಂಙಳ್ ಸಅದಿ, ಸಯ್ಯಿದ್ ಅಶ್ರಫ್ ತಂಗಳ್ ಕುಂಬೋಳ್ ಸಹಿತ ಹಲವಾರು ಉಲಮಾಗಳು, ಭಾಗವಹಿಸಿದ್ದರು.
ಹಲವಾರು ಮುದರ್ರಿಸ್, ಖತೀಬ್, ಇಮಾಮರು, ಮುಅಲ್ಲಿಮರು ಭಾಗವಹಿಸಿ ಉಲಮಾ ಸಂಗಮವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮರಿಕ್ಕಳ ಜಮಾಅತ್ ಹಾಗೂ ಬೇಕಲ್ ಮಜ್ಲಿಸ್ ಇಶಾಅತಿಸ್ಸುನ್ನ ಸಂಘಟನೆಯನ್ನು ಜನರು ಮುಕ್ತಕಂಠದಿಂದ ಶ್ಲಾಘಿಸಿದರು.
✍️ಡಿ.ಎ. ಅಬ್ಬಾಸ್ ರಝ್ವಿ ಪಡಿಕ್ಕಲ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.