ಬಂಟ್ವಾಳ (www.vknews.in) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ಸಭೆಯು ಬಿ.ಸಿ.ರೋಡಿನ ರೋಟರಿ ಕ್ಲಬ್ ನಲ್ಲಿ ನಡೆಯಿತು. ಸಭೆಯು ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಅಧ್ಯಕ್ಷ ಮೂನಿಶ್ ಅಲಿ ಮಾತನಾಡಿ, ಎಲ್ಲಾ ಪ್ರತಿನಿಧಿಗಳು, ನಾಯಕರು ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸಿ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಕ್ಷೇತ್ರ ಸಮಿತಿಯೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದ ಅವರು ಪಕ್ಷದ ಕಾರ್ಯ ಚಟುವಟಿಕೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು .
ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪಾನ್ಸೋ ಪ್ರಾಂಕೊ ಉದ್ಘಾಟಿಸಿದರು. ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ನಾಯಕತ್ವ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಜೊತೆ ಕಾರ್ಯದರ್ಶಿ ಗಳಾದ ಮುಬಾರಕ್ ಗೂಡಿನಬಳಿ, ಅಶ್ರಫ್ ತಲಪಾಡಿ ಕ್ಷೇತ್ರ ಸಮಿತಿ ಸದಸ್ಯ ಮುಷ್ತಾಕ್ ತಲಪಾಡಿ ಮಾತನಾಡಿದರು.
ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದ ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ನವಾಝ್ ಉಳ್ಳಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮತ್ತು ಅಶ್ರಫ್ ಅಡ್ಡೂರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಪಕ್ಷದ ಆಂತರಿಕ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಸಾಹುಲ್ ಎಸ್.ಎಚ್, ಕಾರ್ಯದರ್ಶಿಯಾಗಿ ಅಕ್ಬರ್ ಅಲಿ ಪೊನ್ನೋಡಿ, ಉಪಾಧ್ಯಕ್ಷರಾಗಿ ಮುಷ್ತಾಕ್ ತಲಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಕಬೀರ್ ಅಕ್ಕರಂಗಡಿ ಮತ್ತು ಬಶೀರ್ ಬೊಳ್ಳಾಯಿ, ಕೋಶಾಧಿಕಾರಿಯಾಗಿ ಯಾಸಿರ್ ಕಲ್ಲಡ್ಕ, ಸಮಿತಿ ಸದಸ್ಯರಾಗಿ ಮೂನಿಷ್ ಆಲಿ, ಶಾಕಿರ್ ಕುಮೇರ್, ಇಕ್ಬಾಲ್ ಇಝಾನ್, ಇರ್ಫಾನ್ ಕಾವಳಕಟ್ಟೆ ಮತ್ತು ಅಝೀಝ್ ಕಡಂಬು ಆಯ್ಕೆಯಾದರು.
ಇದೇ ವೇಳೆ ಬಂಟ್ವಾಳ ಪುರಸಭೆಯ ಎರಡನೇ ಅವಧಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೂನಿಷ್ ಆಲಿ ಅವರನ್ನು ಸನ್ಮಾನಿಸಲಾಯಿತು.
ಪ್ರತಿನಿಧಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಅಬೂಬಕ್ಕರ್ ಮದ್ದ, ರಾಜ್ಯ ಮಹಿಳಾ ನಾಯಕಿ ಶಾಹಿದಾ ತಸ್ನೀಂ, ಜಿಲ್ಲಾ ಸಮಿತಿ ಸದಸ್ಯೆ ಝೀನತ್ ಗೂಡಿನಬಳಿ ಉಪಸ್ಥಿತರಿದ್ದರು.
ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅನ್ವರ್ ಬಡಕಬೈಲ್ ಸ್ವಾಗತಿಸಿ, ಕ್ಷೇತ್ರ ಸಮಿತಿ ನೂತನ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ವಂದಿಸಿದರು. ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.