ಕಾಲಿಕಟ್ (www.vknews.in) : ವಿಶ್ವವಿಖ್ಯಾತ ಜಾಮಿಅ ಮರ್ಕಝುಸ್ಸಖಾಫತಿಸ್ಸುನ್ನಿಯ್ಯ ಶರೀಅತ್ ವಿಭಾಗ 2008’ನೇ ಸಾಲಿನಲ್ಲಿ ಬಿರುದು ಪಡೆದ ಸಖಾಫಿ ಫ್ಯಾಮಿಲಿ ಸಂಗಮ ಮರ್ಕಝ್ ಇಂಗ್ಲೀಷ್ ಮೀಡಿಯಂ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಸ್ಥಾಪಕರು ಗುರುಶ್ರೇಷ್ಟರಾದ ಶೈಖುನಾ ಸುಲ್ತಾನುಲ್ ಉಲಮಾ’ರವರ ಸಮಕ್ಷದಲ್ಲಿ ನಡೆದ ಕಾರ್ಯಕ್ರಮ ನೂರಾರು ಶಿಷ್ಯಂದಿರು ಹಾಗು ಅವರ ಕುಟುಂಬದವರು ಪಾಲ್ಗೊಂಡಿದ್ದರು. “ಸಮಾಜ ಸೇವೆಯನ್ನು ಧಾರ್ಮಿಕ ಜೀವನದ ಭಾಗವಾಗಿ ಕಾಣಬೇಕು, ಅನಾಥ ಬಡವರ ಪಾಲಿಗೆ ನಾವು ಆಸರೆಯಾಗಿರಬೇಕು ಹಾಗು ಕೌಟುಂಬಿಕ ಜೀವನದಲ್ಲಿ ಮಾದರಿ ಜೀವನವನ್ನು ಅಳವಡಿಸುವಂತಾಗಿರಬೇಕೆಂದು” ಶೈಖುನಾ ಹೇಳಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಫಾರೂಖ್ ತಙ್ಙಳ್ ಅಧ್ಯಕ್ಷತೆ ವಹಿಸಿದರು. ಮರ್ಕಝ್ ಮ್ಯಾನೇಜರ್ ಸಿ. ಮುಹಮ್ಮದ್ ಫೈಝಿ ಉದ್ಘಾಟಿಸಿದರು. ಉಸ್ತಾದ್ ಅಝೀಝ್ ಸಖಾಫಿ ವೆಳ್ಳಯೂರು, ಕೌಸರ್ ಸಖಾಫಿ, ಸಯ್ಯಿದ್ ಮರ್ತಲಾ ತಙ್ಙಳ್, ಮಾತನಾಡಿದರು. ಹಾಗು ಹೊಸ ಸಮಿತಿಯನ್ನು ಆಯ್ಕೆಮಾಡಲಾಯಿತು. ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ಮಕ್ಕಳ ಆಹಾರಕ್ಕಾಗಿ 1001 ಚೀಲ ಅಕ್ಕಿ, ಇತರೆ ಆಹಾರ ಸಾಮಗ್ರಿಗಳನ್ನು ನೀಡಲಾಯಿತು.
ಚೇರ್ಮನ್ : ಸಯ್ಯಿದ್ ಫಾರೂಖ್ ಸಖಾಫಿ ಮಲಪ್ಪುರಂ ಕನ್ವೀನರ್: ಸಾಬಿತ್ ಅಬ್ದುಲ್ಲಾ ಸಖಾಫಿ ಕಾಲಿಕಟ್ ಕೋಶಾಧಿಕಾರಿ: ಹಾಜಿ ನಾಸರ್ ಸಖಾಫಿ ಮಾಹಿ ಹಾಗು ವಿವಿಧ ರಾಜ್ಯ, ದೇಶಗಳ ಪ್ರತಿನಿಧಿಗಳಾಗಿ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ (ಕರ್ನಾಟಕ) ಜಅ್ಫರ್ ಸಖಾಫಿ (ಯು.ಎ.ಇ) ಇಸ್ಮಾಯಿಲ್ ಸಖಾಫಿ (ಒಮಾನ್) ಅಬ್ದುಲ್ಲಾ ಸಖಾಫಿ (ಕತ್ತರ್) ಇಪ್ಪತೇಳು ಸದಸ್ಯರನ್ನೊಳಗೊಂಡ ಸಮಿತಿಯನ್ನು ಆಯ್ಕೆಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.