ಕಾಸರಗೋಡು (www.vknews.in) : ಮಾವಿನಕಟ್ಟೆಯಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿ ಯುವಕನೋರ್ವ ಗಾಯಗೊಂಡು ಮೃತಪಟ್ಟಿದ್ದಾನೆ. ಕಾರು ಚಲಾಯಿಸುತ್ತಿದ್ದ ಉಪ್ಪಳ ಸೊಂಗಲ್ ಪ್ರತಾಪ್ ನಗರದ ಮುಬಾಶಿರ್(21) ಮೃತರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ.
ಕುಂಪಲ ಮುಳ್ಳೇರಿಯಾ ಕೆಎಸ್ಟಿಪಿ ರಸ್ತೆಯ ಮಾವಿನಕಟ್ಟದಲ್ಲಿ ಬುಧವಾರ ಬೆಳಗ್ಗೆ 8.45ಕ್ಕೆ ಅಪಘಾತ ಸಂಭವಿಸಿದೆ. ಬಸ್ ಮುಳ್ಳೇರಿಯಿಂದ ಬದಿಯಡುಕ್ಕೆ ಹೋಗುತ್ತಿತ್ತು. ಕಾರು ಮುಳ್ಳೇರಿಯಾ ಕಡೆಗೆ ಹೋಗುತ್ತಿತ್ತು. ಕಾರು ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ತೀವ್ರವಾಗಿ ಗಾಯಗೊಂಡ ಮುಬಾಶಿರ್ ಅವರನ್ನು ಚೆಂಗಳ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಇವರು ಅಬ್ದುಲ್ ರೆಹಮಾನ್ ಮತ್ತು ಸೀನಂ ದಂಪತಿಯ ಪುತ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.