ಇತಿಹಾಸ ಪ್ರಸಿದ್ದ ಅರಸಿನಮಕ್ಕಿ (ಗೋರಿ)ದರ್ಗಾ ಶರೀಫ್, ರಹ್ಮಾನಿಯಾ ಮಸೀದಿ ಹಾಗೂ ಖಲಂದರ್ ಶಾ ಎಜುಕೇಶನ್ ಸಂಸ್ಥೆಗೆ ಪದಾಧಿಕಾರಿಗಳ ಆಯ್ಕೆ. ಗೌರವಾಧ್ಯಕ್ಷರಾಗಿ ಎಸ್ ಬಿ ದಾರಿಮಿ ಉಸ್ತಾದ್, ಅಧ್ಯಕ್ಷರಾಗಿ ರಝಾಕ್ ಕರಾವಳಿ ನೆಲ್ಯಾಡಿ, ಕಾರ್ಯದರ್ಶಿಯಾಗಿ ದಾವೂದು ಇಬ್ರಾಹಿಂ ಹೊಸಮಠ, ಕೋಶಾಧಿಕಾರಿಯಾಗಿ ಉಮರ್ ಬೈಲಂಗಡಿ ಆಯ್ಕೆ..
ಕೊಕ್ಕಡ (www.vknews.in) ; ಇಲ್ಲಿಗೆ ಸಮೀಪದ ಅರಸಿನ ಮಕ್ಕಿ (ಗೋರಿ)ಯ ಇತಿಹಾಸ ಪ್ರಸಿದ್ದ ಶಾಂತಿ ಸೌಹಾರ್ದತೆಯ ಆಧ್ಯಾತ್ಮಿಕ ತಾಣ ಬೀರಾನ್( ರ)- ನಾಝಿಮ್ ಶಾ (ರ) ದರ್ಗಾ ಶರೀಪ್ ,ರಹ್ಮಾನಿಯಾ ಮಸೀದಿ ಹಾಗೂ ಖಲಂದರ್ ಶಾ ಎಜುಕೇಶನ್ ಸೆಂಟರ್ ಇದರ ನೂತನ ಪಧಾಧಿಕಾರಿಗಳ ಆಯ್ಕೆ ತಾರೀಕು 30/8/2024 ರಂದು ರಹ್ಮಾನಿಯ ಮಸೀದಿಯಲ್ಲಿ ಸೇರಿದ ಮಹಾಸಭೆಯಲ್ಲಿ ನಡೆಯಿತು.
ಅರಸಿನ ಮಕ್ಕಿ ಊರು ಹಿಂದುಳಿದ ಗ್ರಾಮೀಣ ಪ್ರದೇಶವಾದರೂ ಇಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅವುಲಿಯಾಗಳ ಅದ್ಬುತ ಕರಾಮತ್ ನಿಂದಾಗಿ ಪರಸ್ಪರ ಶಾಂತಿ ಸೌಹಾರ್ದತೆಯ ಆಧ್ಯಾತ್ಮಿಕ ನೆಲೆಯಾಗಿ ಬೆಳೆದು ನಿಂತಿದ್ದು ಇಂದು ಪ್ರಸಿದ್ದ ಝಿಯಾರತ್ ಕೆಂದ್ರವಾಗಿ ಸಾವಿರಾರು ಜನರ ಆಶಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅದ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಬಿ ದಾರಿಮಿ ಉಸ್ತಾದ್ ಹೇಳಿದರು.
ಸ್ಥಳೀಯ ಖತೀಬ್ ಉಮರ್ ಉಸ್ತಾದ್ ಉದ್ಘಾಟಿಸಿದರು. ಅಬ್ಬಾಸ್ ಅರಸಿನ ಮಕ್ಕಿ ಸ್ವಾಗತಿಸಿದರು. ರಾಜಕೀಯ ಮುಖಂಡ ನಝೀರ್ ಮಠ ಪ್ರಸ್ತಾವನೆಗೈದರು. ಪದಾಧಿಕಾರಿಗಳಾಗಿ ಅಬ್ದುಲ್ ರಝಾಕ್ ಕರಾವಳಿ ನೆಲ್ಯಾಡಿ ಅಧ್ಯಕ್ಷರು,ಹಾಜಿ ಅಬೂಬಕರ್ ಕೆ ಕೆ ಕೋಲ್ಪೆ,ಹಾಜಿ ಮೊಯಿದಿನ್ ಪುತ್ತು ಅಸರ್ ಉಪಾಧ್ಯಕ್ಷರು, ದಾವೂದ್ ಇಬ್ರಾಹಿಂ ಹೊಸಮಠ ಪ್ರ ಕಾರ್ಯದರ್ಶಿ, ಯೂಸುಪ್ ಕೆ ಕೊಕ್ಕಡ, ಅಬ್ದುಲ್ ಖಾದಿರ್ ಡ್ರಸ್ ವೆಲ್ ಜೊತೆ ಕಾರ್ಯದರ್ಶಿಗಳು, ಉಮರ್ ಬೈಲಂಗಡಿ ಕೋಶಾಧಿಕಾರಿ ಇಸ್ಮಾಯಿಲ್ ತಂಙಳ್ ಸಂಚಾಲಕರು, ನಝೀರ್ ಮಠ ಸಲಹೆಗಾರರು, ಉಸ್ತಾದ್ ಎಸ್ ಬಿ ದಾರಿಮಿ ಗೌರಧ್ಯಕ್ಷರಾಗಿ ಆಯ್ಕೆಯಾದರು.
ಸಭೆಯಲ್ಲಿ ಉಪ್ಪಿನಂಗಡಿ ಜಮಾತ್ ಅಧ್ಯಕ್ಷ ಎಚ್ ಯೂಸುಪ್ ಹಾಜಿ,ಉದ್ಯಮಿ ಹಮೀದ್ ಕರಾವಳಿ ಉಪ್ಪಿನಂಗಡಿ,ಅಬ್ದುಲ್ ರಹ್ಮಾನ್ ಹಾಜಿ ಕೊಲ್ಲೆಜಾಲ್, ಯೂಸುಪ್ ಹಾಜಿ ಪೆದ್ಮಲೆ, ಎವರೆಸ್ಟ್ ಫಯಾಝ್, ಕಾಂಗ್ರೆಸ್ ಮುಖಂಡ ಹಕೀಂ ಕೊಕ್ಕಡ,ಶುಕೂರ್ ಶಾಮಿಯಾನ ನೆಲ್ಯಾಡಿ, ಮುಹಮ್ಮದ್ ಕೂಟೇಲ್ ,ಹನೀಪ್ ಹನೀಪಿ,ಮಜೀದ್ ಅರಸಿನ ಮಕ್ಕಿ ಮೊದಲಾದ ಅನೇಕ ಮಹನೀಯರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.