(www.vknews.in) ; ವಯನಾಡ್ ಭೂಕುಸಿತ ಪೀಡಿತರಿಗೆ ಪುನರ್ವಸತಿ ಕಲ್ಪಿಸುವ ಮಹತ್ವದ ಹೆಜ್ಜೆಯಲ್ಲಿ, HIF ಇಂಡಿಯಾ ಪ್ರಾಜೆಕ್ಟ್ ಅಶಿಯಾನಾ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯ ಅಡಿಯಲ್ಲಿ 30 ಸೆಂಟ್ ಭೂಮಿಯಲ್ಲಿ 5 ಹೊಸ ಮನೆ, ನಿರ್ಮಿಸಲು ಶಿಲಾನ್ಯಾಸ ಸಮಾರಂಭ 1-09-2024 ರಂದು ನಡೆಯಿತು.
ಈ ಯೋಜನೆಯ ಅಂಗವಾಗಿ, HIF ಇಂಡಿಯಾ 725 ಚದರ ಅಡಿ ಹಾಗೂ 2ಬಿಎಚ್ಕೆ (2 ಬೆಡ್ರೂಮ್, ಹಾಲ್, ಮತ್ತು ಕಿಚನ್) ಹೊಂದಿದ 5 ಮನೆಗಳನ್ನು ನಿರ್ಮಿಸಲಿದೆ ಮತ್ತು ಪ್ರತಿ ಮನೆಗೆ 5 cents ಭೂಮಿ ಲಭಿಸಲಿದೆ, ಪ್ರತಿ ಮನೆಗೆ ಸರಾಸರಿ ವೆಚ್ಚ 10 ಲಕ್ಷ ರೂಪಾಯಿ ಆಗಿದೆ, ಇದು ಅವಶ್ಯಕತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಮತ್ತು ಸುರಕ್ಷಿತ ಆಶ್ರಯ ಒದಗಿಸಲು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮತ್ತು ಮುಂದಿನ 5 ತಿಂಗಳ ಒಳಗೆ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುದು.
ಸರಳ ಕಾರ್ಯಕ್ರಮದಲ್ಲಿ ಸ್ಥಳಿಯ ವಯನಾಡ್ ಶಾಸಕ ಟಿ. ಸಿದ್ದೀಕ್, ದಾರುಲ್ ಫಲಾಹಿಲ್ ಇಸ್ಲಾಮಿಯಾ ಕಾರ್ಯದರ್ಶಿ ಮುಹಮ್ಮದ್ ಅಲಿ ಫೈಝಿ ಉಸ್ತಾದ್, ಟ್ರಿಕೈಪಟ್ಟದ ಸೇಂಟ್ ಜಾನ್ ಪಾಲ್ II ಚರ್ಚ್ನ ಫಾದರ್ ಬಿನೋಯಿ ಕಲಾಪೋರಕ್ಕಲ್ . ಶ್ರೀರಾಮ ದೇವಸ್ಥಾನ, ಕಾಪುಕುನ್ನನ ಸನಲ್ ಪೋಜಾರಿ, ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀ ನಾಸಿರ್ ಮನು ಅವರ ಉಪಸ್ಥಿತರಿದ್ದರು.
HIF ಇಂಡಿಯಾದಿಂದ ಕಾರ್ಯಕಾರಿ ಸದಸ್ಯರಾದ ರಿಜ್ವಾನ್ ಪಾಂಡೇಶ್ವರ, ನಬೀಲ್ ಕುದ್ರೋಳಿ, ಸಾಜಿದ್ ಎಕೆ, ಮತ್ತು ಅಶಿಯಾನಾ ಯೋಜನೆ ಮುಖ್ಯಸ್ಥರಾದ ಎಸ್.ಎಂ. ಫಾರೂಕ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
HIF ಇಂಡಿಯಾ ಈ ಯೋಜನೆ ಸಾಧ್ಯವಾಗಿಸಲು ಬೆಂಬಲಿಸಿದ ಎಲ್ಲ ದಾನಿಗಳು ಮತ್ತು ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ. ನಿಮ್ಮ ದಾನ ಮತ್ತು ಪ್ರಾರ್ಥನೆಗಳು ಈ ಯೋಜನೆಯನ್ನು ಮುಂದಕ್ಕೆ ಸಾಗಿಸಲು ಪ್ರಮುಖವಾಗಿವೆ. ಭೂಕುಸಿತ ಪೀಡಿತರಿಗೆ ಆಶ್ರಯ ಮತ್ತು ಭದ್ರತೆಯನ್ನು ಒದಗಿಸಲು ನಾವು ಕೆಲಸ ಮಾಡುತ್ತಿರುವಾಗ, ದಯವಿಟ್ಟು ನಿಮ್ಮ ಬೆಂಬಲವನ್ನು ಮುಂದುವರಿಸಿರಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.