ಮಂಗಳೂರು (www.vknews. in) ; ಜಿಲ್ಲಾಧಿಕಾರಿಗಳ ಮೂಲಕ ಮನವಿಯೊಂದನ್ನು ಅರ್ಪಿಸಿದ ಬಳಿಕ ಮಾತನಾಡಿದ ಸಿ.ಅಬ್ದುರ್ರಹ್ಮಾನ್ ಹೇಳಿಕೆಯೊಂದನ್ನು ನೀಡುತ್ತಾ, ವಕ್ಛ್ ಸೊತ್ತು ಅತೀ ಅಮೂಲ್ಯವಾಗಿದ್ದು , ಇದರ ತಿದ್ದುಪಡಿಯನ್ನು ಮುಸ್ಲಿಂ ಲೀಗ್ ಸಹಿಸುವುದಿಲ್ಲ.
2006 ರಲ್ಲಿ ಜೆಪಿಸಿ ಅಧ್ಯಕ್ಷರಾದ ರಹ್ಮಾನ್ ಖಾನ್ ವಕ್ಛ್ ಸೊತ್ತು ರಕ್ಷಣಾ ವರದಿಯನ್ನು ಮಂಡಿಸಿದ್ದು ,2013 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅನುಮೋದಿಸಿರುತ್ತಾರೆ.ಅದೇ ನಿಯಮವನ್ನು ಜಾರಿಯಾಗಲಿ ಎಂದು ಹೇಳಿಕೆ ನೀಡಿ ವಕ್ಛ್ ಸೊತ್ತು ತಿದ್ದುಪಡಿಗೆ ಪ್ರತಿರೋಧ ವ್ಯಕ್ತಪಡಿಸಿ ರಾಷ್ಟ್ರೀಯ ಮುಸ್ಲಿಂ ಲೀಗ್ ನಾಯಕರು ಆದೇಶಿಸಿದರೆ ತನ್ನ ಪಕ್ಷ ವ್ಯಾಪಕವಾಗಿ ಪ್ರತಿಭಟಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.
ಮನವಿ ಅರ್ಪಣಾ ಸಂದರ್ಭದಲ್ಲಿ ಪಕ್ಷ ಜಿಲ್ಲಾ ಪದಾಧಿಕಾರಿಗಳಾದ ಶಬೀರ್ ತಲಪಾಡಿ , ಶೌಕತ್ ಅಲೀ ಜೋಕಟ್ಚೆ , ಹಾಜಿ ಅಬ್ದುರ್ರಹ್ಮಾನ್ ಕಂದಕ್ , ಬಶೀರ್ ಉಳ್ಳಾಲ ಜಿಲ್ಲಾ ಮುಸ್ಲಿಂ ಲೀಗ್ ಕೋಶ ಅಧಿಕಾರಿ ರಿಯಾಝ್ ಹರೇಕಳ , ಕೆ.ಸಿ ಅಬ್ದುಲ್ ಖಾದರ್ ಕಾವೂರು ಮತ್ತು ಮುಹಮ್ಮದ್ ಇಸ್ಮಾಯಿಲ್ ಉಪಸ್ಥಿತಿ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.