ಕೈಕಂಬ (www.vknews. in) : ದಿನಾಂಕ 01/08/2024 : ಝಹರಾ ಇಂಟರ್ನ್ಯಾಷನಲ್ ಸ್ಕೂಲ್, ಮರ್ಕಝ್ ಕೈಕಂಬ ಇದರ ಪೋಷಕರ ಸಭೆಯು ನಡೆಯಿತು. ಸಂಸ್ಥೆಯ ಸಂಚಾಲಕರಾದ ಬದ್ರುದ್ದೀನ್ ಅಝ್ಹರಿ ಅಲ್ ಕಾಮಿಲ್ ಅಧ್ಯಕ್ಷತೆ ವಹಿಸಿದರು. ಝಹರಾ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಝೀಕ್ಯೂ ಪ್ರೀ ಸ್ಕೂಲ್ ಇದರ ಪ್ರಾಂಶುಪಾಲರಾದ ಆಶಿಕ್ ಅಲ್ ಹಿಕಮಿ ಸಂಸ್ಥೆಯ ನಿಯಮಗಳನ್ನು ತಿಳಿಸಿದರು.
ಸಂಸ್ಥೆಯು ಈ ಅಧ್ಯಯನ ವರ್ಷದಲ್ಲಿ ಮಾಡಿದ ಸಾಧನೆಗಳು ಹಾಗೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಅಧ್ಯಯನ ವರ್ಷದಲ್ಲಿ ಉದ್ದೇಶಿಸಿರುವ ಪದ್ಧತಿಗಳನ್ನು ಮಂಡಿಸಿದರು. ಶಾಲೆಯ ಹಾಗೂ ಮಕ್ಕಳ ಅಭಿವೃದ್ಧಿಯ ಕುರಿತು ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಮೀಲಾದ್ ಆಚರಣೆಯ ಪ್ರಯುಕ್ತ ನಡೆಸುವ ರಬೀಅ್ ಫೆಸ್ಟ್ ಸೆಪ್ಟೆಂಬರ್ 14 ರಂದು ನಡೆಸುವುದೆಂದು ತೀರ್ಮಾನಿಸಲಾಯಿತು. ಅದಕ್ಕೆ ಬೇಕಾದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಚೇರ್ಮನ್ ಆಗಿ ಸಿದ್ದೀಕ್ ಮದನಿ, ಕನ್ವೀನರಾಗಿ ಆರಿಫ್ ಮಿಸ್ರಿಯಾ,ವೈಸ್ ಚೇರ್ಮನ್ ಗಳಾಗಿ ಇಕ್ಬಾಲ್ ಪರಾರಿ, ಸರ್ಫ್ರಾಝ್ ಉಳಾಯಿಬೆಟ್ಟು. ಜೊತೆ ಕನ್ವೀನರ್ ಗಳಾಗಿ ಬಶೀರ್ ಮರ್ಕಝ್ ನಗರ, ಹಮೀದ್ ಶಾಂತಿನಗರ, ಖಜಾಂಜಿಯಾಗಿ ರಫೀಕ್ ಉಳಾಯಿಬೆಟ್ಟು ಆಯ್ಕೆಯಾದರು.
ಈ ಸಭೆಯ ಕೊನೆಯಲ್ಲಿ ಮರ್ಕಝ್ ಕೈಕಂಬದಲ್ಲಿ ಸೆಪ್ಟೆಂಬರ್ 8 ರಂದು ಬಹಳ ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಿರುವ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ನ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.