(www.vknews.in) ; ಇತಿಹಾಸ ಪ್ರಸಿದ್ಧವಾದ ಪುತ್ತೂರು ಮಂಜ ದರ್ಗಾ ಶರೀಫ್ ಪರಿಸರದಲ್ಲಿ, ಮರ್ಕಝ್ ಮಂಜ ವತಿಯಿಂದ ಪ್ರತಿ ತಿಂಗಳ ಮೊದಲ ಶುಕ್ರವಾರ ನಡೆದು ಬರುತ್ತಿರುವ ಮಜ್ಲಿಸುಲ್ ಬದ್ರಿಯ್ಯೀನ್ ಪ್ರಾರ್ಥನಾ ಸಂಗಮ ಹಾಗೂ ಸುನ್ನೀ ಸಂಯುಕ್ತ ಜಮಾಅತ್ ಪುತ್ತೂರು ತಾಲೂಕು ಕಚೇರಿ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 6 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಮರ್ಕಝ್ ಮಂಜ ಸಭಾಂಗಣದಲ್ಲಿ ನಡೆಯಲಿರುವುದು.
ಸಂಯುಕ್ತ ಜಮಾಅತ್ ಕಚೇರಿಯ ಉದ್ಘಾಟನೆಯನ್ನು ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ಊದ್ ಅಲ್ ಬುಖಾರಿ ಕೂರತ್ ನಿರ್ವಹಿಸಿ ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ಕೊಡಲಿದ್ದಾರೆ. ಮರ್ಕಝ್ ಮಂಜ ಅಧ್ಯಕ್ಷ ಡಾ ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಸುನ್ನೀ ಜಂಇಯ್ಯತುಲ್ ಉಲಮಾ ದ.ಕ. ಜಿಲ್ಲಾಧ್ಯಕ್ಷ ಬಿ ಕೆ ಮುಹಮ್ಮದ್ ಅಲಿ ಫೈಝಿ ಸಂಪ್ಯ ಉಧ್ಬೋಧನೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಪುತ್ತೂರು ತಾಲೂಕು ಪದಾಧಿಕಾರಿಗಳಿಗೆ ಸನ್ಮಾನ ನಡೆಯಲಿದ್ದು, ಸಮಿತಿಯ ಸಲಹೆಗಾರರದ ಹಂಝ ಮುಸ್ಲಿಯಾರ್ ಈಶ್ವರಮಂಗಿಲ, ಹಾಜಿ ಪಿ ಎಂ ಅಬ್ದುಲ್ ರಹ್ಮಾನ್ ಅರಿಯಡ್ಕ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ, ಕೋಶಾಧಿಕಾರಿ ಯೂಸುಫ್ ಸಾಜ ಗೌಸಿಯಾ ಹಾಗೂ ಇತರ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲ ಸ್ತ್ರೀ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.