(www.vknews. in) ಟಿ ಬಿ ಕುಟುಂಬದ ವತಿಯಿಂದ ತೆಕ್ಕಿಲ್ ಕುಟುಂಬದ ಪ್ರಮುಖರಾದ ಟಿ ಎಂ ಶಹೀದ್ ತೆಕ್ಕಿಲ್ ರವರಿಗೆ ಸಂಪಾಜೆಯಲ್ಲಿ ಸನ್ಮಾನ
ತೆಕ್ಕಿಲ್ ಕುಟುಂಬದ ಅಂಗವಾದ ಟಿ ಬಿ(ತೆಕ್ಕಿಲ್ ಬಾಬಾ) ಕುಟುಂಬ ವತಿಯಿಂದ ಹಲವಾರು ಸಮಾಜಮುಖೀ ಸೇವೆಗಳ ಮೂಲಕ ಜನಮನಗೆದ್ದ ಸಾಮಾಜಿಕ, ರಾಜಕೀಯ ಮುಖಂಡರಾದ ಟಿ ಎಂ ಶಹೀದ್ ರವರನ್ನು ಸಂಪಾಜೆ ಗ್ರಾಮದ ಚಟ್ಟೆಕ್ಕಲ್ ಅಬ್ದುಲ್ ಖಾದರ್ ಅವರ ಮನೆಯಲ್ಲಿ ಅವರ ಸೇವೆ, ಸಾಧನೆ, ಜನಪರ ಕಾಳಜಿಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ಕುಟುಂಬ ಸಂಗಮಗಳು ಪರಸ್ಪರ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಇದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಉತ್ತಮ ದೇಶವನ್ನು ಕಟ್ಟಲು ಸಾಧ್ಯ’ ಎಂದರು. ಉತ್ತಮ ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರದಲ್ಲೂ ಸಾಧನೆಗಳನ್ನು ಮಾಡುತ್ತಾ ಬೆಳೆದು, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವ ವ್ಯಕ್ತಿಗಳಾಗಿ ಮೂಡಿಬರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಕೇಳಿದರು.
ಟಿ ಬಿ ಕುಟುಂಬದ ಪ್ರಮುಖರಾದ ಹನೀಫ್ ಟಿ ಬಿ, ಅಬ್ದುಲ್ ಖಾದರ್ ಚಟ್ಟೆಕ್ಕಲ್ಲು, ಮುನೀರ್ ದಾರಿಮಿ ಗೂನಡ್ಕ, ಆರಿಫ್ ಗೂನಡ್ಕ, ಮುಹಮ್ಮದ್ ಪಿ ಜಿ ಸುಳ್ಯ, ದುಬೈ ಉದ್ಯಮಿ ಅಬ್ಬಾಸ್ ಎಂ ಎ, ಸಾಮಾಜಿಕ ಕಾರ್ಯಕರ್ತರಾದ ಮುಹಮ್ಮದ್ ಗೌಸ್ ಸಹಿತ ಅನೇಕರು ಉಪಸ್ಥಿತರಿದ್ದರು. ಸಾದಿಕ್ ಮಾಸ್ಟರ್ ಸ್ವಾಗತಿಸಿ, ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.